ಜಿಲ್ಲಾಡಳಿತ ಸ್ವಾತಂತ್ರೋತ್ಸವ ಸಿದ್ಧತಾ ಸಭೆ

ಎಡಿಎಂ ಉದಯಕುಮಾರ್ ಪೆರ್ಲ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಿತು. ಆರ್‌ಡಿಒಗಳಾದ ಎಂ.ಎಸ್.ವಿಜುಕುಮಾರ್ ಮತ್ತು ಪಿ. ಸುದೀಪ್, ಕಾಸರಗೋಡು ತಹಸೀಲ್ದಾರ್ ವಿ.ಶ್ರೀಕುಮಾರ್ ಇದ್ದರು.
ಎಡಿಎಂ ಉದಯಕುಮಾರ್ ಪೆರ್ಲ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಯಿತು. ಆರ್‌ಡಿಒಗಳಾದ ಎಂ.ಎಸ್.ವಿಜುಕುಮಾರ್ ಮತ್ತು ಪಿ. ಸುದೀಪ್, ಕಾಸರಗೋಡು ತಹಸೀಲ್ದಾರ್ ವಿ.ಶ್ರೀಕುಮಾರ್ ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸ್ವಾತಂತ್ರೃ ದಿನವನ್ನು ಜಿಲ್ಲೆಯಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಲಾಯಿತು. ಜಿಲ್ಲಾಮಟ್ಟದ ಪರೇಡ್ ವಿದ್ಯಾನಗರದ ಕಾಸರಗೋಡು ಪುರಸಭಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಯಶಸ್ಸಿಗೆ ಎಲ್ಲ ಸರ್ಕಾರಿ ಅಧಿಕಾರಿಗಳ ಸಹಕಾರ ಅತ್ಯಗತ್ಯ. ಜಿಲ್ಲಾಧಿಕಾರಿ ಕಚೇರಿಯ ಕಿರು ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಎಡಿಎಂ ಪಿ.ಉದಯಕುಮಾರ್ ಕಾರ್ಯಕ್ರಮಕ್ಕೆ ಸಾರ್ವಜನಿಕರ ಭಾಗವಹಿಸುವಿಕೆ ಅಗತ್ಯ ಎಂದು ತಿಳಿಸಿದರು.
ಎಆರ್ ಕ್ಯಾಂಪ್‌ನ ಸಹಾಯಕ ಕಮಾಂಡೆಂಟ್ ನೇತೃತ್ವದಲ್ಲಿ ನಡೆಯಲಿರುವ ಪಥಸಂಚಲನದ ತಾಲೀಮು, ಕಾಸರಗೋಡು ನಗರಸಭಾ ಕ್ರೀಡಾಂಗಣದಲ್ಲಿ ಆಗಸ್ಟ್ 10, 11 ಮತ್ತು ಆಗಸ್ಟ್ 13ರಂದು ನಡೆಯಲಿವೆ. ದೇಶಭಕ್ತಿಯ ಭಾವನೆ ಮೂಡಿಸುವ ಕಾರ್ಯಕ್ರಮ, ಸಾಂಸ್ಕೃತಿಕ ವೈವಿಧ್ಯ ಪ್ರಸ್ತುತಪಡಿಸಲು ಆಸಕ್ತಿ ಹೊಂದಿರುವ ಶಾಲೆಗಳು ಜಿಲ್ಲಾಧಿಕಾರಿ ಕಚೇರಿಯ ‘ಡಿ’ ವಿಭಾಗವನ್ನು ಸಂಪರ್ಕಿಸಬೇಕು. ಕ್ರೀಡಾಂಗಣದಲ್ಲಿ ಅಗತ್ಯವಿರುವ ಪೆಂಡಾಲ್, ಪೀಠೋಪಕರಣಗಳು, ದೀಪಾಲಂಕಾರ ಮತ್ತು ಧ್ವನಿವರ್ಧಕ ವ್ಯವಸ್ಥೆ ಒದಗಿಸುವ ಜವಾಬ್ದಾರಿಯನ್ನು ಪಿಡಬ್ಲುೃಡಿಗೆ, ಭದ್ರತಾ ವ್ಯವಸ್ಥೆಗಳ ಉಸ್ತುವಾರಿಯನ್ನು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹಾಗೂ ಕ್ರೀಡಾಂಗಣ ಮತ್ತು ಅದರ ಆವರಣ ಸ್ವಚ್ಛಗೊಳಿಸುವ ಜವಾಬ್ದಾರಿಯನ್ನು ಕಾಸರಗೋಡು ನಗರಸಭಾ ಕಾರ್ಯದರ್ಶಿಗೆ ವಹಿಸಿಕೊಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಕಿರು ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಆರ್‌ಡಿಒಗಳಾದ ಎಂ.ಎಸ್.ವಿಜುಕುಮಾರ್ ಮತ್ತು ಪಿ. ಸುದೀಪ್, ಕಾಸರಗೋಡು ತಹಸೀಲ್ದಾರ್ ವಿ.ಶ್ರೀಕುಮಾರ್ ಹಾಗೂ ಕಾರ್ಯಕ್ರಮದ ಆಯೋಜನೆಯಲ್ಲಿ ತೊಡಗಿರುವ ವಿವಿಧ ಇಲಾಖೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net