ಸತ್ಯ, ಅಹಿಂಸಾ ತತ್ವಗಳಿಂದ ವಿಶ್ವದಲ್ಲಿ ಶಾಂತಿ ಸಾಧ್ಯ

ಉಡುಪಿಯಲ್ಲಿ ಆಯೋಜಿಸಿದ್ದ ಗೌತಮ ಬುದ್ಧ ಜಯಂತಿಯನ್ನು ಎಂ.ಎ. ಗಫೂರ್​​ ಉದ್ಘಾಟಿಸಿದರು. ಅಬೀದ್​ ಗದ್ಯಾಳ, ಮಂಜುನಾಥ್​ ಪೂಜಾರಿ, ದಿನಕರ್​ ಹೇರೂರು, ಅಜೆಯ್​ಕುಮಾರ್​ ಎಸ್​., ನಾಗರಾಜ್​ ಜಿ.ಎಸ್​., ಪೂರ್ಣಿಮಾ, ರಮೇಶ್​ ರಘುರಾಂ ಇದ್ದರು.
ಉಡುಪಿಯಲ್ಲಿ ಆಯೋಜಿಸಿದ್ದ ಗೌತಮ ಬುದ್ಧ ಜಯಂತಿಯನ್ನು ಎಂ.ಎ. ಗಫೂರ್​​ ಉದ್ಘಾಟಿಸಿದರು. ಅಬೀದ್​ ಗದ್ಯಾಳ, ಮಂಜುನಾಥ್​ ಪೂಜಾರಿ, ದಿನಕರ್​ ಹೇರೂರು, ಅಜೆಯ್​ಕುಮಾರ್​ ಎಸ್​., ನಾಗರಾಜ್​ ಜಿ.ಎಸ್​., ಪೂರ್ಣಿಮಾ, ರಮೇಶ್​ ರಘುರಾಂ ಇದ್ದರು.
Published on

* ಎಂ.ಎ. ಗಫೂರ್​ ಅಭಿಪ್ರಾಯ

* ಭಗವಾನ್​ ಗೌತಮ ಬುದ್ಧ ಜಯಂತಿ

ಉಡುಪಿ: ಮಾನವರೆಲ್ಲರೂ ಉತ್ತಮ ಬದುಕು ಕಟ್ಟಿಕೊಳ್ಳುವಂತಾಗಲು ಗೌತಮ ಬುದ್ಧನು ಅನೇಕ ಸಂದೇಶ ನೀಡಿದ್ದಾನೆ. ವಿಶ್ವಕ್ಕೇ ಶಾಂತಿ, ಸಮಾನತೆ, ಪ್ರೀತಿ ಮತ್ತು ಕರುಣೆಯ ಮಾರ್ಗ ಬೋಧಿಸಿದ್ದಾನೆ. ಜಗದಲ್ಲಿಂದು ಅನೇಕ ಅಹಿತಕರ ಘಟನೆ ಸಂಭವಿಸುತ್ತಿದೆ. ಹಿಂಸೆ, ಅಸಮಾನತೆ ಹಾಗೂ ಮೌಢ್ಯಗಳನ್ನು ದೂರಗೊಳಿಸುವಲ್ಲಿ ಬುದ್ಧನ ಅಹಿಂಸಾ ಹಾಗೂ ಸತ್ಯ ಪ್ರತಿಪಾದನೆಯ ತತ್ವಗಳು ಸಹಕಾರಿಯಾಗಿದೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್​ ಹೇಳಿದರು.
ಉಡುಪಿಯ ಸರ್ಕಾರಿ ಪ.ಪೂ. ಕಾಲೇಜ್​ನ ಜನತಾ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬುದ್ಧಿಸ್ಟ್​ ಸೊಸೈಟಿ ಆಫ್​ ಇಂಡಿಯಾ ಉಡುಪಿ ವತಿಯಿಂದ ಶುಕ್ರವಾರ (ಮೇ 1) ಆಯೋಜಿಸಿದ್ದ ಭಗವಾನ್​ ಗೌತಮ ಬುದ್ಧ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬೆಳಕಾಗಲಿ ಬುದ್ಧನ ಸಂದೇಶ

ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಬೆಂಗಳೂರು ಅಧ್ಯಕ್ಷ ಮಂಜುನಾಥ್​ ಪೂಜಾರಿ ಮಾತನಾಡಿ, ಮಾನವೀಯ ಮೌಲ್ಯಗಳೆಲ್ಲ ನಶಿಸುತ್ತಿರುವ ಈ ಕಾಲಘಟ್ಟದಲ್ಲಿ ಮತ್ತೊಮ್ಮೆ ಮೌಲ್ಯಗಳನ್ನು ಬಿತ್ತರಿಸಲು ಬುದ್ಧನ ಸಂದೇಶಗಳು ಬೆಳಗಬೇಕಿದೆ. ಮನುಷ್ಯನ ಬದುಕು ಸತ್ಯದ ಹಾದಿಯಲ್ಲಿರಬೇಕು ಎಂದು ತಿಳಿಸಿಕೊಟ್ಟ ಬುದ್ಧನ ಸಂದೇಶವನ್ನು ಪಾಲಿಸುವಂತಾಗಬೇಕು ಎಂದರು.
ಭಗವಾನ್​ ಬುದ್ಧನ ಕುರಿತು ಬೌದ್ಧ ಚಿಂತಕ ರಮೇಶ್​ ರಘುರಾಂ ವಿಶೇಷ ಉಪನ್ಯಾಸ ನೀಡಿದರು. ಬುದ್ಧ ಪೂರ್ಣಿಮೆಯ ನಿಮಿತ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ ಅಧ್ಯಕ್ಷತೆ ವಹಿಸಿದ್ದರು.
ಉಡುಪಿಯ ಸರ್ಕಾರಿ ಪ.ಪೂ. ಕಾಲೇಜ್​ನ ಜನತಾ ಸಭಾಭವನದಲ್ಲಿ ಭಗವಾನ್​ ಗೌತಮ ಬುದ್ಧ ಜಯಂತಿ ಆಚರಿಸಲಾಯಿತು
ಉಡುಪಿ ನಗರಾಭಿವೃದ್ಧಿ  ಪ್ರಾಧಿಕಾರದ ಅಧ್ಯಕ್ಷ ದಿನಕರ್​ ಹೇರೂರು, ಜಿಲ್ಲಾ ಬುದ್ಧಿಸ್ಟ್​ ಸೊಸೈಟಿ ಆಪ್​ ಇಂಡಿಯಾ ಅಧ್ಯಕ್ಷ  ಅಜೆಯ್​ ಕುಮಾರ್​ ಎಸ್​., ಕಾಲೇಜ್​ನ ಉಪನ್ಯಾಸಕ ನಾಗರಾಜ್​ ಜಿ.ಎಸ್​., ಬುದ್ಧಿಸ್ಟ್​ ಸೊಸೈಟಿ ಆಫ್​ ಇಂಡಿಯಾ ಸದಸ್ಯರು, ಭಗವಾನ್​ ಬುದ್ಧ ತತ್ವದ ಅನುಯಾಯಿಗಳು ಉಪಸ್ಥಿತರಿದ್ದರು.
"

ಯಾವುದೇ ಧರ್ಮವಾದರೂ ಮಾನವನ ನತೆ ಎತ್ತಿಹಿಡಿಯಬೇಕು. ಗೌತಮ ಬುದ್ಧನ ಚಿಂತನೆಯಂತೆ ನಮ್ಮನ್ನು ನಾವು ಅರಿತು ಜ್ಞಾನ ಮಾರ್ಗದಲ್ಲಿ ನಡೆಯಬೇಕು. ಅದರಿಂದ ಮಾತ್ರ ಜಗತ್ತಿನಲ್ಲಿ ಶಾಂತಿ, ಸಹೋದರತ್ವ ನೆಲೆಸಲು ಸಾಧ್ಯ.

— ಅಬೀದ್​ ಗದ್ಯಾಳ. ಅಪರ ಜಿಲ್ಲಾಧಿಕಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net