ಬೆಸ್ಟ್ ಫೌಂಡೇಶನ್‌ನಿಂದ ನೀರಿನ ಟ್ಯಾಂಕ್ ವಿತರಣೆ

 ತಾಲೂಕಿನ ಕೊಯ್ಯೂರು ಗ್ರಾಮದ ಕೋಡಿಬೆಟ್ಟು ಪ್ರದೇಶಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿ ನೀರಿನ ಟ್ಯಾಂಕ್ ವಿತರಿಸಿದರು. ಪ್ರವೀಣ್ ಫರ್ನಾಂಡಿಸ್, ಪ್ರವೀಣ್ ಗೌಡ ಇತರರು ಇದ್ದರು.
ತಾಲೂಕಿನ ಕೊಯ್ಯೂರು ಗ್ರಾಮದ ಕೋಡಿಬೆಟ್ಟು ಪ್ರದೇಶಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿ ನೀರಿನ ಟ್ಯಾಂಕ್ ವಿತರಿಸಿದರು. ಪ್ರವೀಣ್ ಫರ್ನಾಂಡಿಸ್, ಪ್ರವೀಣ್ ಗೌಡ ಇತರರು ಇದ್ದರು.
Published on

ಬೆಳ್ತಂಗಡಿ: ತಾಲೂಕಿನ ಕೊಯ್ಯೂರು ಗ್ರಾಮದ ಕೋಡಿಬೆಟ್ಟು ಪ್ರದೇಶಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ ನೀಡಿ ಮಳೆ ಹಾನಿ ಪರಿಶೀಲಿಸಿದರು.

ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದ ರಕ್ಷಿತ್ ಶಿವರಾಂ, ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಅಗತ್ಯ ನೆರವು ಒದಗಿಸಲು ಸಾಧ್ಯವಾದ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಕೋಡಿಬೆಟ್ಟು ನಿವಾಸಿ ಹೈದರ್ ಅವರ ಮನೆಗೆ ಮರ ಬಿದ್ದು ಕುಡಿಯುವ ನೀರಿನ ಟ್ಯಾಂಕ್ ಸಂಪೂರ್ಣವಾಗಿ ಹಾನಿಗೊಳಗಾಗಿತ್ತು. ಈ ಹಿನ್ನೆಲೆಯಲ್ಲಿ ಬೆಸ್ಟ್ ಫೌಂಡೇಶನ್ ವತಿಯಿಂದ ಅವರಿಗೆ ಹೊಸ ನೀರಿನ ಟ್ಯಾಂಕ್ ನೀಡಲಾಯಿತು.
ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಫರ್ನಾಂಡಿಸ್, ಮಾಜಿ ತಾಪಂ ಸದಸ್ಯ ಪ್ರವೀಣ್ ಗೌಡ, ಪಕ್ಷದ ಮುಖಂಡ ಮಹಮ್ಮದ್ ಸಿದ್ದೀಕ್ ಮಲೆಬೆಟ್ಟು, ಬೂತ್ ಸಮಿತಿ ಅಧ್ಯಕ್ಷ ಸಲೀಂ ಪಾತ್ರಾಲಾ, ಬೆಳ್ತಂಗಡಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅರುಣ್ ಲೋಬೊ ಹಾಗೂ ನವೀನ್ ಗೌಡ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net