ಬ್ರಹ್ಮಾವರ ಮಟಪಾಡಿಯ ನಿವೃತ್ತ ಶಿಕ್ಷಕ ದಿ.ಶಿವರಾಮ ಶೆಟ್ಟಿ ಸ್ಮರಣಾರ್ಥ ಮಂಗಳವಾರ ಮಗಬಸ್ರೂರು ರಾಜೀವ ಶೆಟ್ಟಿ ಮತ್ತು ಕುಟುಂಭಿಕರು ಕೊರಗ ಕಾಲೋನಿಯ ಜನರಿಗೆ ನೆರವು ನೀಡುವ ಕಾರ್ಯಕ್ರಮ ನಡೆಯಿತು.
Published on:
Copied
Follow Us
ಬ್ರಹ್ಮಾವರ: ತಮ್ಮ ಬದುಕಲ್ಲಿ ಅಳವಡಿಸಿಕೊಂಡ ಆದರ್ಶಗಳನ್ನು ವಿದ್ಯಾರ್ಥಿಗಳಲ್ಲೂ ಬೆಳೆಸುವ ಮೂಲಕ ನಿವೃತ್ತ ಶಿಕ್ಷಕ ಮಟಪಾಡಿ ಶಿವರಾಮ ಶೆಟ್ಟಿ ಮಾದರಿಯಾಗಿದ್ದಾರೆ ಎಂದು ನಿವೃತ್ತ ಪ್ರಾಂಶುಪಾಲ ಗಣನಾಥ ಎಕ್ಕಾರು ಹೇಳಿದರು.
ಬ್ರಹ್ಮಾವರ ಮಟಪಾಡಿಯ ನಿವೃತ್ತ ಶಿಕ್ಷಕ ದಿವಂಗತ ಶಿವರಾಮ ಶೆಟ್ಟಿ ಅವರ 10ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಮಂಗಳವಾರ ಸಾರ್ವಜನಿಕ ರಸ್ತೆ ಉದ್ಘಾಟನೆ ಹಾಗೂ ಆಯ್ದ 20 ಮಂದಿ ಪರಿಶಿಷ್ಟ ಜಾತಿ ಕುಟುಂಬದ ಫಲಾನುಭವಿಗಳಿಗೆ ಆಹಾರ ಸಾಮಗ್ರಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿವರಾಮ ಶೆಟ್ಟಿ ಕುಟುಂಬದ ಜಾಗದಲ್ಲಿ ಸ್ಥಳೀಯರ ಉಪಯೋಗಕ್ಕಾಗಿ ನಿರ್ಮಿಸಿರುವ ಸಾರ್ವಜನಿಕ ರಸ್ತೆಯನ್ನು ಹಂದಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ ಪೂಜಾರಿ ಸಾರ್ವಜನಿಕ ರಸ್ತೆ ಉದ್ಘಾಟಿಸಿದರು.
ಶಿವರಾಮ ಶೆಟ್ಟಿ ಕುಟುಂಬದವರಾದ ಮಹಾಬಲ ಶೆಟ್ಟಿ, ಬಸ್ರೂರು ರಾಜೀವ ಶೆಟ್ಟಿ, ಡಾ.ದೇವರಾಜ್, ಡಾ.ಸುರೇಂದ್ರ ಶೆಟ್ಟಿ, ಮನೋಜ್ ಕುಮಾರ್ ಶೆಟ್ಟಿ, ಹಂದಾಡಿ ಗ್ರಾಪಂ ಉಪಾಧ್ಯಕ್ಷ ಅಶೋಕ ಪೂಜಾರಿ, ಸದಸ್ಯೆ ಜ್ಯೋತಿ ಬಾಯಿ ಉಪಸ್ಥಿತರಿದ್ದರು. ಸುಧೀರ್ ಕುಮಾರ್ ಶೆಟ್ಟಿ ನಿರೂಪಿಸಿದರು.