ಶಿಕ್ಷಣದೊಂದಿಗೆ ಶಿಸ್ತು, ನೈತಿಕ ಮೌಲ್ಯ ಅವಶ್ಯ

 ಉಜಿರೆ ಎಸ್‌ಡಿಎಂ ಸ್ವಾಯತ್ತ ಕಾಲೇಜಿನಲ್ಲಿ 80ನೇ ಸ್ವಾತಂತ್ರೃ ದಿನಾಚರಣೆ ಅಂಗವಾಗಿ ಎಸ್‌ಡಿಎಂ ಸೈನಾಥಾನ್ ನಡೆಯಿತು. ಪ್ರಮುಖರಾದ ರವಿಪ್ರಸಾದ್, ಪ್ರೊ.ವಿಶ್ವನಾಥ್ ಪಿ., ಪ್ರೊ.ಶ್ರೀಧರ ಎನ್.ಭಟ್ಟ, ಗಜಾನನ ಆರ್.ಭಟ್, ಡಾ.ಸೌಮ್ಯಾ ಬಿ.ಪಿ. ಮತ್ತಿತರರು ಉಪಸ್ಥಿತರಿದ್ದರು.
ಉಜಿರೆ ಎಸ್‌ಡಿಎಂ ಸ್ವಾಯತ್ತ ಕಾಲೇಜಿನಲ್ಲಿ 80ನೇ ಸ್ವಾತಂತ್ರೃ ದಿನಾಚರಣೆ ಅಂಗವಾಗಿ ಎಸ್‌ಡಿಎಂ ಸೈನಾಥಾನ್ ನಡೆಯಿತು. ಪ್ರಮುಖರಾದ ರವಿಪ್ರಸಾದ್, ಪ್ರೊ.ವಿಶ್ವನಾಥ್ ಪಿ., ಪ್ರೊ.ಶ್ರೀಧರ ಎನ್.ಭಟ್ಟ, ಗಜಾನನ ಆರ್.ಭಟ್, ಡಾ.ಸೌಮ್ಯಾ ಬಿ.ಪಿ. ಮತ್ತಿತರರು ಉಪಸ್ಥಿತರಿದ್ದರು.
Published on

ಬೆಳ್ತಂಗಡಿ: ಸೈನಿಕರ ಜೀವನ ಶಿಸ್ತು, ಸಮಯಪಾಲನೆ, ಧೈರ್ಯ, ಆತ್ಮವಿಶ್ವಾಸ ಹಾಗೂ ದೇಶಭಕ್ತಿ ಮೇಲೆ ನಿಂತಿದೆ. ವೈಯಕ್ತಿಕ ಸುಖ, ಕುಟುಂಬ ಹಾಗೂ ಅನೇಕ ಸವಾಲುಗಳನ್ನು ಬದಿಗೊತ್ತಿ ರಾಷ್ಟ್ರದ ಹಿತಕ್ಕಾಗಿ ಸೇವೆ ಸಲ್ಲಿಸುವುದು ಸೈನಿಕರ ಕರ್ತವ್ಯ. ಯುವಜನರು ದೇಶದ ಭವಿಷ್ಯವಾಗಿದ್ದು, ಶಿಕ್ಷಣದ ಜತೆಗೆ ಶಿಸ್ತು, ನೈತಿಕ ಮೌಲ್ಯಗಳು ಮತ್ತು ಸಾಮಾಜಿಕ ಜವಾಬ್ದಾರಿ ಬೆಳೆಸಿಕೊಳ್ಳಬೇಕು. ದೇಶದ ಅಖಂಡತೆ ಮತ್ತು ಶಾಂತಿಯನ್ನು ಕಾಪಾಡುವುದು ಕೇವಲ ಸೈನಿಕರ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಭಾರತೀಯ ಭೂ ಸೇನೆ ನಿವೃತ್ತ ಸಾರ್ಜೆಂಟ್ ರವಿಪ್ರಸಾದ್ ಹೇಳಿದರು.

ಉಜಿರೆ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ಎನ್ನೆಸ್ಸೆಸ್ ಹಾಗೂ ಎನ್‌ಸಿಸಿ ವಿಭಾಗದ ವತಿಯಿಂದ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ, ರೋವರ್ಸ್ ಮತ್ತು ರೇಂಜರ್ಸ್, ಯೂತ್ ರೆಡ್‌ಕ್ರಾಸ್ ಸಂಯುಕ್ತ ಆಶ್ರಯದಲ್ಲಿ 80ನೇ ಸ್ವಾತಂತ್ರೃ ದಿನಾಚರಣೆ ಅಂಗವಾಗಿ ಬುಧವಾರ ‘ಎಸ್‌ಡಿಎಂ ಸೈನಾಥಾನ್’ ಬೃಹತ್ ಓಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಾಂಶುಪಾಲ ಪ್ರೊ.ವಿಶ್ವನಾಥ್ ಪಿ. ಅಧ್ಯಕ್ಷತೆ ವಹಿಸಿದ್ದರು. ಸೈನಾಥಾನ್ ಓಟ ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರದ ಆವರಣದಿಂದ ಆರಂಭಗೊಂಡು ಉಜಿರೆ ಮಹಾದ್ವಾರದವರೆಗೆ ಸಾಗಿತು. ಅಲ್ಲಿಂದ ಹಿಂದಿರುಗಿ ಕಾಲೇಜಿನ ಆವರಣದಲ್ಲಿ ಸಮಾರೋಪಗೊಂಡಿತು.

ಯೋಜನಾಧಿಕಾರಿ ಡಾ.ಮಾಲಿನಿ ಅಂಚನ್ ಸ್ವಾಗತಿಸಿದರು. ಮಂಜುಶ್ರೀ ನಿರೂಪಿಸಿದರು. ಹರೀಶ್ ಶೆಟ್ಟಿ ವಂದಿಸಿದರು.

ದೇಶದ ಗಡಿ ಹಾಗೂ ನಾಗರಿಕರ ಸುರಕ್ಷತೆಗಾಗಿ ಸೈನಿಕರು ಎದುರಿಸುವ ಸವಾಲುಗಳು, ತ್ಯಾಗ ಮತ್ತು ಕರ್ತವ್ಯ ಅಪಾರ. ಸೈನಿಕರ ಜೀವನದ ಅನುಭವ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಕರ್ತವ್ಯ ಪ್ರಜ್ಞೆ ಮತ್ತು ರಾಷ್ಟ್ರ ಸೇವೆಯ ಮನೋಭಾವ ಮತ್ತಷ್ಟು ಬಲಪಡಿಸಬೇಕು.

— ಪ್ರೊ.ವಿಶ್ವನಾಥ್ ಪಿ., ಪ್ರಾಂಶುಪಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net