ಪಾಳುಬಿದ್ದ ಅಂಗಡಿ, ಶೌಚಗೃಹ

 ಮರವಂತೆ ವರಾಹ ಸ್ವಾಮಿ ದೇವಸ್ಥಾನದ ಸಮೀಪ ನಿರ್ಮಿಸಲಾಗಿದ್ದ ಅಂಗಡಿ ಕೋಣೆಗಳು ಉಪಯೋಗಿಕ್ಕಿಲ್ಲದೆ ಪಾಳು ಬಿದ್ದಿದೆ.
ಮರವಂತೆ ವರಾಹ ಸ್ವಾಮಿ ದೇವಸ್ಥಾನದ ಸಮೀಪ ನಿರ್ಮಿಸಲಾಗಿದ್ದ ಅಂಗಡಿ ಕೋಣೆಗಳು ಉಪಯೋಗಿಕ್ಕಿಲ್ಲದೆ ಪಾಳು ಬಿದ್ದಿದೆ.
Published on
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಮರವಂತೆ ವರಾಹ ಸ್ವಾಮಿ ದೇವಸ್ಥಾನದ ಸಮೀಪ ಸೌಪರ್ಣಿಕಾ ನದಿ ತೀರದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಅಂಚಿನಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಿರ್ಮಿಸಲಾಗಿದ್ದ ಸುಸಜ್ಜಿತ ಶೌಚಗೃಹ, ಅಂಗಡಿ ಕೋಣೆಗಳು ಉಪಯೋಗಿಕ್ಕಿಲ್ಲದೆ ಪಾಳುಬಿದ್ದಿದೆ.
ಕೋಸ್ಟಲ್ ಸರ್ಕ್ಯೂಟ್ ಯೋಜನೆಯಡಿ ಮರವಂತೆ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದ ಸಮೀಪ ಬೀಚ್ ಎದುರುಗಡೆ ಪ್ರವಾಸಿಗರ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಸುಸಜ್ಜಿತ ಶೌಚಗೃಹ ಹಾಗೂ 10 ಅಂಗಡಿ ಕೋಣೆಗಳನ್ನು ನಿರ್ಮಿಸಲಾಗಿತ್ತು. ಶೌಚಗೃಹ ಹಾಗೂ ಅಂಗಡಿ ಕೋಣೆಗಳು ನಿರ್ಮಾಣಗೊಂಡು ದಶಕಗಳೇ ಕಳೆದಿದ್ದರೂ ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಿಲ್ಲ.

ನಿರ್ಲಕ್ಷೃಕ್ಕೆ ಸಾಕ್ಷಿ

ಪ್ರತಿದಿನ ಮರವಂತೆ ಬೀಚ್‌ಗೆ ಸಹಸ್ರಾರು ಮಂದಿ ಪ್ರವಾಸಿಗರು ಬರುತ್ತಿರುತ್ತಾರೆ. ಸಮುದ್ರ ಮತ್ತು ನದಿ ನಡುವೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲಿ ನಿರ್ಮಿಸಲಾಗಿರುವ ಶೌಚಗೃಹ ಅಸಹನೀಯತೆಗೆ ಸಾಕ್ಷಿಯಾಗಿದೆ. ಬಾತ್ ರೂಮ್ ಮತ್ತು ಮೂತ್ರಾಲಯ ತೆರೆದುಕೊಂಡಿದ್ದು ಕಾಲಿಡಲಾಗದಷ್ಟು ಗಲೀಜಾಗಿದೆ. ಬೇಸಿನ್‌ಗಳು ಒಡೆದು ಹೋಗಿದ್ದು, ನೀರಿನ ವ್ಯವಸ್ಥೆ ಇಲ್ಲ. ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿದೆ.

ಅಂಗಡಿ ಕೋಣೆಗಳು ನಿರುಪಯುಕ್ತ

ಶೌಚಗೃಹ ಪಕ್ಕದಲ್ಲಿ ನಿರ್ಮಿಸಲಾಗಿರುವ 10 ಅಂಗಡಿ ಕೋಣೆಗಳು ನಿರುಪಯುಕ್ತವಾಗಿದ್ದು, ಅಂಗಡಿಗಳಿಗೆ ಹಾಕಿದ ಬೀಗಗಳು ತುಕ್ಕು ಹಿಡಿದಿವೆ. ಬಾಗಿಲುಗಳು ಒಡೆದಿದ್ದು, ಅಂಗಡಿ ಒಳಗೆ ನಗತ್ಯ ವಸ್ತುಗಳು ರಾಶಿ ಬಿದ್ದಿವೆ. ಈ ಅಂಗಡಿ ಸಂಕೀರ್ಣಗಳು ಕೆಲವೇ ದಿನಗಳಲ್ಲಿ ಧರಾಶಾಯಿಯಾಗುವ ಸ್ಥಿತಿಯಲ್ಲಿವೆ. ಎದುರಿನ ಲೈಟಿಂಗ್ ಕಂಬಗಳು ತುಕ್ಕು ಹಿಡಿದಿದ್ದರೆ, ಕಲ್ಲಿನ ಬೆಂಚುಗಳು ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿದ್ದು, ಬೆಂಚುಗಳು ಕುಳಿತುಕೊಳ್ಳಲು ಆಗದಷ್ಟು ಗಲೀಜಾವೆೆ. ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ವ್ಯವಸ್ಥೆ ಸಾರ್ವಜನಿಕರಿಗೆ ಹಾಗೂ ಪ್ರವಾಸಿಗರ ಉಪಯೋಗಕ್ಕೆ ಬಾರದ ಸ್ಥಿತಿ ನಿರ್ಮಾಣಗೊಂಡಿದೆ.
ಸಾರ್ವಜನಿಕರ ಮತ್ತು ಪ್ರವಾಸಿಗರ ಅನುಕೂಲಕ್ಕೆ ಮರವಂತೆಯಲ್ಲಿ ನಿರ್ಮಿಸಿದ ಗೂಡಂಗಡಿ ಹಾಗೂ ಶೌಚಗೃಹ ಸಂಕೀರ್ಣ ದಶಕ ಸಂದರೂ ಉಪಯೋಗಕ್ಕೆ ಬೀಳದೆ ಇರುವುದು ಮತ್ತು ಸೊತ್ತುಗಳು ನಾಶವಾಗುತ್ತಿರುವುದಕ್ಕೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು, ಆದಷ್ಟು ಶೀಘ್ರ ವ್ಯವಸ್ಥೆ ಸರಿಪಡಿಸಿ ಜನರ ಉಪಯೋಗಕ್ಕೆ ದೊರೆಯುವಂತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಮರವಂತೆ ಬೀಚ್ ಸಮೀಪ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿತ ಸುಸಜ್ಜಿತ ಶೌಚಗೃಹ ಸಾರ್ವಜನಿಕರ ಉಪಯೋಗಕ್ಕೆ ದೊರೆತಿಲ್ಲ. ಬಾತ್‌ರೂಮ್ ಮತ್ತು ಮೂತ್ರಾಲಯ ತೆರೆದುಕೊಂಡಿದ್ದು, ಕಾಲಿಡಲಾಗದಷ್ಟು ಗಲೀಜು ಮೆತ್ತಿಕೊಂಡಿದೆ. ನೀರಿನ ವ್ಯವಸ್ಥೆ ಇಲ್ಲ. ಇದರ ಪಕ್ಕದಲ್ಲಿರುವ ಅಂಗಡಿ ಸಂಕೀರ್ಣಗಳು ಬೀಳುವ ಸ್ಥಿತಿಗೆ ತಲುಪಿವೆ. ದೇವಸ್ಥಾನಕ್ಕೆ ಮತ್ತು ಬೀಚ್‌ಗೆ ಬರುವ ಭಕ್ತರ ಹಾಗೂ ಪ್ರವಾಸಿಗರ ಅನುಕೂಲಕ್ಕೆ ಸಿಗಬೇಕಾಗಿದ್ದ ಸೌಲಭ್ಯ ಮೂಲೆಗುಂಪಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net