ಡಿಜಿ ಪೇ ಸೌಲಭ್ಯಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಚಾಲನೆ ನೀಡಿದರು. ಪ್ರಮುಖರಾದ ಸತೀಶ್ಚಂದ್ರ ರೈ, ಸೋಮೇಶ್, ಸುಜಾತಾ, ರಕ್ಷಕ್ ಮತ್ತಿತರರಿದ್ದರು.
ಕಡಬ: ಹಳ್ಳಿಯಲ್ಲಿರುವ ಜನರು ತಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ತೆಗೆಯಲು ದೂರದ ಪ್ರದೇಶದಲ್ಲಿರುವ ಎಟಿಎಂಗಳಿಗೆ ತೆರಳ ಬೇಕಾಗುತ್ತದೆ. ಅದರ ಬದಲಾಗಿ ಇದೀಗ ಧರ್ಮಸ್ಥಳ ಯೋಜನೆ ವತಿಯಿಂದ ಡಿಜಿ ಪೇ ಕಾರ್ಯಕ್ರಮದ ಮೂಲಕ ತಮ್ಮ ಊರಿನಲ್ಲಿಯೇ ಹಣ ಪಡೆಯಬಹುದು. ಈ ಸೌಕರ್ಯ ಗ್ರಾಮೀಣ ಜನರಿಗೆ ವರದಾನವಾಗಲಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಹೇಳಿದರು.
ಕಡಬ ತಾಲೂಕಿನ ಬಂಟ್ರ ನೆಕ್ಕಿಲಾಡಿ ಸಿ.ಎಸ್.ಸಿ ಕೇಂದ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನ ಡಿಜಿ ಪೇ ಸೌಲಭ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಂಟ್ರ ಒಕ್ಕೂಟ ಅಧ್ಯಕ್ಷ ಸತೀಶ್ಚಂದ್ರ ರೈ, ಕೃಷಿ ಮೇಲ್ವಿಚಾರಕ ಸೋಮೇಶ್, ತಾಲೂಕು ಹಣಕಾಸು ಪ್ರಬಂಧಕಿ ಸುಜಾತಾ, ತಾಲೂಕಿನ ನೋಡೆಲ್ ಅಧಿಕಾರಿ ರಕ್ಷಕ್, ಜಿಲ್ಲಾ ಐಟಿ ಪ್ರಬಂಧಕ ಶ್ರೇಯಸ್ ಮೊದಲಾದವರು ಇದ್ದರು.
ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುವಾರ್ ವಂದಿಸಿದರು. ಬಿಳಿನೆಲೆ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ ಸ್ವಾಗತಿಸಿ, ನಿರೂಪಿಸಿದರು.