ಗ್ರಾಮೀಣ ಜನರಿಗೆ ಡಿಜಿ-ಪೇ ವರದಾನ

ಉಡುಪಿ ತಾಲೂಕಿನ ಕೆಳಾರ್ಕಳಬೆಟ್ಟು ಸಿಎಸ್​ಸಿ ಕೇಂದ್ರದಲ್ಲಿ ಡಿಜಿ-ಪೇ ಸೌಕರ್ಯಕ್ಕೆ ಆನಂದ ಸುವರ್ಣ ಚಾಲನೆ ನೀಡಿದರು. ನಾಗರಾಜ್​ ಶೆಟ್ಟಿ, ಸುರೇಂದ್ರ, ದಿಲೀಪ್​ ಜೈನ್​ ಇತರರಿದ್ದರು.
ಉಡುಪಿ ತಾಲೂಕಿನ ಕೆಳಾರ್ಕಳಬೆಟ್ಟು ಸಿಎಸ್​ಸಿ ಕೇಂದ್ರದಲ್ಲಿ ಡಿಜಿ-ಪೇ ಸೌಕರ್ಯಕ್ಕೆ ಆನಂದ ಸುವರ್ಣ ಚಾಲನೆ ನೀಡಿದರು. ನಾಗರಾಜ್​ ಶೆಟ್ಟಿ, ಸುರೇಂದ್ರ, ದಿಲೀಪ್​ ಜೈನ್​ ಇತರರಿದ್ದರು.
Published on

ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಅನಿಸಿಕೆ

* ಸಿಎಸ್​ಸಿ ಕೇಂದ್ರದಲ್ಲಿ ಸೌಲಭ್ಯಕ್ಕೆ ಚಾಲನೆ

ಉಡುಪಿ: ಹಳ್ಳಿಗಳಲ್ಲಿರುವ ಜನರು ತಮ್ಮ ಬ್ಯಾಂಕ್​ ಖಾತೆಯಲ್ಲಿರುವ ಹಣ ತೆಗೆಯಲು ದೂರದ ಪ್ರದೇಶಗಳಲ್ಲಿರುವ ಎಟಿಎಂಗಳಿಗೆ ತೆರಳಬೇಕಾಗುತ್ತದೆ. ಅದರ ಬದಲಾಗಿ ಇದೀಗ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಎಸ್​ಸಿ ಕೇಂದ್ರಗಳಲ್ಲಿಯೇ ಡಿಜಿ-ಪೇ ಮೂಲಕ ತಮ್ಮ ಊರಿನಲ್ಲಿಯೇ ಹಣ ಹಿಂಪಡೆಯಬಹುದಾಗಿದೆ. ಗ್ರಾಮೀಣ ಜನರಿಗೆ ಈ ಸೌಕರ್ಯ ವರದಾನವಾಗಲಿದೆ ಎಂದು ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿ ತಾಲೂಕಿನ ಕೆಳಾರ್ಕಳಬೆಟ್ಟು ಸಿಎಸ್​ಸಿ ಕೇಂದ್ರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್​ನ ಡಿಜಿ-ಪೇ ಸೌಲಭ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮದಲ್ಲಿಯೇ ಡಿಜಿ-ಪೇ ವ್ಯವಸ್ಥೆ ಲಭ್ಯ ಇರುವುದರಿಂದ ಜನರಿಗೆ ಸಮಯ ಮತ್ತು ಓಡಾಟದ ಖರ್ಚು-ವೆಚ್ಚಗಳೂ ಉಳಿತಾಯವಾಗಲಿದೆ. ಬ್ಯಾಂಕಿಗೆ ಹೋಗಿ ರಶೀದಿ ಬರೆಯುವ ಅಥವಾ ಎಟಿಎಂ ಕಾರ್ಯದ ಬಗ್ಗೆ ಗೊಂದಲ ಮಾಡಿಕೊಳ್ಳುವ ಅಗತ್ಯತೆಯೂ ಇಲ್ಲ ಎಂದರು.
ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ್​ ಶೆಟ್ಟಿ, ತಾಲೂಕು ಯೋಜನಾಧಿಕಾರಿ ಸುರೇಂದ್ರ, ಸಿಎಸ್​ಸಿ ವಿಭಾಗದ ಯೋಜನಾಧಿಕಾರಿ ದಿಲೀಪ್​ ಜೈನ್​, ತಾಲೂಕು ನೋಡಲ್​ ಅಧಿಕಾರಿ, ಸೇವಾ ಪ್ರತಿನಿಧಿಗಳು ಮತ್ತು ಸಂಘದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net