ಡೀಸೆಲ್ ಕಳವು ಆರೋಪಿಗಳ ಬಂಧನ

ಜೈಮುತ್ತಾ , ಮುತ್ತು
ಜೈಮುತ್ತಾ , ಮುತ್ತು
Published on
ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಕೌಕ್ರಾಡಿ ಗ್ರಾಮದ ಅಲಂಪಾಡಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೊಲೇರೋ ಪಿಕಪ್ ವಾಹನದಲ್ಲಿ ಬಂದು ಹೆದ್ದಾರಿ ಬದಿ ನಿಲ್ಲಿಸಲಾದ ಟ್ಯಾಂಕರ್‌ನಿಂದ ಡೀಸೆಲ್ ಕದಿಯುತ್ತಿದ್ದ ತಂಡವನ್ನು ಪೊಲೀಸರು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ತೊಪ್ಪನಹಳ್ಳಿ ಗ್ರಾಮದ ಜೈಮುತ್ತಾ(23) ಹಾಗೂ ಮುತ್ತು (28) ಬಂಧಿತರು. ಅದೇ ಗ್ರಾಮದ ಮಹಾದೇವ ಟಿ.ಕೆ(27) ಎಂಬಾತ ಪರಾರಿಯಾಗಿದ್ದಾನೆ.
ಕೆಲ ಸಮಯದಿಂದ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆದ್ದಾರಿ ಪಾರ್ಶ್ವದಲ್ಲಿ ನಿಲ್ಲಿಸಲಾದ ವಾಹನಗಳಿಂದ ಡೀಸೆಲ್ ಕಳವು ಪ್ರಕರಣ ಸತತವಾಗಿ ನಡೆಯುತ್ತಿತ್ತು. ಈ ಬಗ್ಗೆ ನಿಖರ ಕಾರ್ಯಾಚರಣೆಗೆ ತೊಡಗಿದ್ದ ಪೊಲೀಸರು ರಾತ್ರಿ ವೇಳೆ ಹೆದ್ದಾರಿ ಗಸ್ತು ಬಿಗಿಗೊಳಿಸಿದ್ದರು. ರಾತ್ರಿ ಕೌಕ್ರಾಡಿ ಗ್ರಾಮದ ಅಲಂಪಾಡಿ ಕ್ರಾಸ್ ಬಳಿ ನಿಲ್ಲಿಸಲಾಗಿದ್ದ ಟ್ಯಾಂಕರ್ ಬಳಿ ಬೊಲೆರೋ ಪಿಕಪ್ ವಾಹನವೊಂದು ಅನುಮಾನಾಸ್ಪದವಾಗಿ ನಿಂತಿರುವುದನ್ನು ಕಂಡು ವಿಚಾರಿಸಲು ಹೋೀದಾಗ ಸ್ಥಳದಲ್ಲಿದ್ದ ಮೂವರು ಪರಾರಿಯಾಗಲು ಯತ್ನಿಸಿದರು.
ಪೊಲೀಸರು ಬೆನ್ನಟ್ಟಿ ಇಬ್ಬರನ್ನು ಬಂಧಿಸಿದರು. 35 ಲೀಟರ್ ಸಾಮರ್ಥ್ಯದ 40 ಕ್ಯಾನ್‌ಗಳಿದ್ದು, ಅವುಗಳ ಪೈಕಿ ಒಂದರಲ್ಲಿ 20 ಲೀಟರ್ ಡೀಸೆಲ್ ಕದ್ದು ತುಂಬಿಸಲಾಗಿತ್ತು ಎಂದು ಉಪ್ಪಿನಂಗಡಿ ಠಾಣಾ ಎಸ್‌ಐ ಸುತೇಶ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net