ಪರ್ಯಾಯ ಪೂರ್ವಭಾವಿಯಾಗಿ ನಡೆಯುವ ಚತುರ್ಥ ಮುಹೂರ್ತ ಸಮಾರಂಭ ಇದಾಗಿದೆ. ಅಂದು ಬೆಳಗ್ಗೆ 6:15ಕ್ಕೆ ಶಿರೂರು ಮಠದಲ್ಲಿ ಶ್ರೀಗಳಿಂದ ದೇವತಾ ಪ್ರಾರ್ಥನೆ, ಚಂದ್ರೇಶ್ವರ, ಅನಂತಾಸನ, ಶ್ರೀಕೃಷ್ಣ-ಮುಖ್ಯಪ್ರಾಣ ದೇವರ ದರ್ಶನ ನಡೆಯಲಿದೆ. ಬಳಿಕ ಧಾನ್ಯ ಮುಹೂರ್ತ ನಡೆಯಲಿದ್ದು, ತದನಂತರ ಮಧ್ವ ಸರೋವರದ ಬಳಿ ಕಟ್ಟಿಗೆ ರಥಕ್ಕೆ ಶಿಖರ ಪ್ರತಿಷ್ಠೆ ಕಾರ್ಯ ನಡೆಯಲಿದೆ. ಶ್ರೀಕೃಷ್ಣನ ಹಾಗೂ ಶಿರೂರು ಮಠದ ಸದ್ಭಕ್ತರು ಪಾಲ್ಗೊಳ್ಳುವಂತೆ ಮಠದ ದಿವಾನ ವಿದ್ವಾನ್ ಡಾ. ಉದಯಕುಮಾರ ಸರಳತ್ತಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.