ಭಕ್ತಿಗೀತೆಗಳಿಂದ ಕ್ಷೇತ್ರದ ಹಿನ್ನೆಲೆ ಪಸರಿಸಲು ಸಾಧ್ಯ

ಶ್ರೀ ಕೊರಗಜ್ಜ ಸಾನಿಧ್ಯದ ತುಳು ಭಕ್ತಿಗೀತೆಗಳ ಧ್ವನಿ ಸುರುಳಿ ಬಿಡುಗಡೆಗೊಳಿಸಲಾಯಿತು. ಶ್ರೀ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಅಧ್ಯಕ್ಷ ಕೃಷ್ಣಕಾಂತ್ ಸಾಯಿನಗರ, ಕೋಟೆಕಾರ್ ಪ.ಪಂ. ಸದಸ್ಯರಾದ ಹರೀಶ್ ರಾವ್, ಸುಜಿತ್ ಮಾಡೂರು, ಮಡ್ಯಾರ್ ಶ್ರೀ ವನದುರ್ಗ ಮತ್ತು ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನದ ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

Published on
ಉಳ್ಳಾಲ: ಶ್ರೀಕ್ಷೇತ್ರದ ಹಿನ್ನೆಲೆ ಸ್ಥಳೀಯ ಪರಿಸರ ಮಾತ್ರವಲ್ಲದೆ ಇತರ ಊರಿಗೂ ಪಸರಿಸಲು ಹಾಡಿನ ಮೂಲಕ ಸಾಧ್ಯ. ಈ ಹಿನ್ನೆಲೆಯಲ್ಲಿ ಮೂರನೇ ಧ್ವನಿ ಸುರುಳಿ ಬಿಡುಗಡೆ ಆಗಿರುವುದು ಶ್ಲಾಘನೀಯ ಎಂದು ಕೋಟೆಕಾರ್ ಪಟ್ಟಣ ಪಂಚಾಯಿತಿ ಸದಸ್ಯ ಹರೀಶ್ ರಾವ್ ಅಭಿಪ್ರಾಯಪಟ್ಟರು.
ಕೋಟೆಕಾರ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಾಯಿನಗರ ನಡಾರ್ ಸ್ವಾಮಿ ಕೊರಗಜ್ಜ ಸೇವಾ ಸಮಿತಿಯಿಂದ ಶ್ರೀ ಕೊರಗಜ್ಜ ಸಾನಿಧ್ಯದ ತುಳು ಭಕ್ತಿಗೀತೆಗಳ ಧ್ವನಿ ಸುರುಳಿ ಬಿಡುಗಡೆ ಮತ್ತು ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಅಧ್ಯಕ್ಷ ಕೃಷ್ಣಕಾಂತ್ ಸಾಯಿನಗರ ಅಧ್ಯಕ್ಷತೆ ವಹಿಸಿದ್ದರು.
ಕೋಟೆಕಾರ್ ಪಪಂ. ಸದಸ್ಯ ಸುಜಿತ್ ಮಾಡೂರು, ಮಡ್ಯಾರ್ ಶ್ರೀ ವನದುರ್ಗ ಮತ್ತು ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನದ ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್, ಗೌರವ ಸಲಹೆಗಾರ ವಿಜಯ ಕುಮಾರ್ ಬೇಕಲ್, ಕೋಶಾಧಿಕಾರಿ ರಾಘವೇಂದ್ರ, ಶಾಸ್ತಾರ ಬಳಗದ ಗುರುಸ್ವಾಮಿ ಯೋಗೀಶ್, ಸಾಯಿನಗರ ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಉಪಾಧ್ಯಕ್ಷ ಕೃಷ್ಣ ಶೆಟ್ಟಿ, ಕೋಶಾಧಿಕಾರಿಗಳಾದ ರುಕ್ಮಿಣಿ, ಹರಿಣಾಕ್ಷಿ, ಸಂಘಟನಾ ಕಾರ್ಯದರ್ಶಿಗಳಾದ ಪ್ರಕಾಶ್, ಯಶವಂತ್, ಪ್ರಧಾನ ಅರ್ಚಕ ಕೃಷ್ಣ ಶೆಟ್ಟಿ, ಸಾಯಿ ಫ್ರೆಂಡ್ಸ್ ಸರ್ಕಲ್ ಕಾರ್ಯದರ್ಶಿ ಪ್ರಕಾಶ್ ಜೋಗಿ, ರಾಮಣ್ಣ, ಉದಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಸಮಿತಿ ಸದಸ್ಯ ಹೇಮಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯೆ ನಿಶಾಲತಾ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net