ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಲ್ಕುಂದ, ಪರ್ವತಮುಖಿ, ಬಾನಡ್ಕ, ದೇವರಹಳ್ಳಿ, ಐನೆಕಿದು, ನೂಚಿಲ, ದೇವರಗದ್ದೆ, ಯೇನೆಕಲ್ಲು, ಮುತ್ಲಾಜೆ ಸೇರಿದಂತೆ ಒಟ್ಟು 8 ವಾರ್ಡ್‌ಗಳಿದ್ದು, 8,076 ಜನಸಂಖ್ಯೆ ಹೊಂದಿದೆ. ಈ ಎಲ್ಲ ಪ್ರದೇಶಗಳಲ್ಲಿ ಬೀದಿದೀಪ ವ್ಯವಸ್ಥೆ ಮಾಡಲಾಗಿದೆ. ಕೆಲವೊಂದು ಕಡೆಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ನೂತನ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.