ಹಟ್ಟಿಅಂಗಡಿ ಶ್ರೀ ವೇದಮೂರ್ತಿ ರಾಮಚಂದ್ರ ಭಟ್ಟರ ಸ್ಮರಣಾರ್ಥ ಆರಾಧನೆ ಕಾರ್ಯಕ್ರಮದ ಭಾಗವಾಗಿ ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಸಭಾಂಗಣದಲ್ಲಿ ವಾತೃವಂದನಾ ಕಾರ್ಯಕ್ರಮ ನಡೆಯಿತು. ಶರಣ ಕುವಾರ, ವೀಣಾರಶ್ಮಿ ಎಂ., ರಾಮ ದೇವಾಡಿಗ, ಶಿಕ್ಷಕರು, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಕುಂದಾಪುರ: ಭಾರತ ದೇಶವನ್ನು ವೇದಗಳು ಮತ್ತು ಇತಿಹಾಸಗಳು ಕರ್ಮದ ನೆಲ, ಧರ್ಮದ ನೆಲ ಹಾಗೂ ಸಾಧನೆಯ ನೆಲವೆಂದು ಕೊಂಡಾಡಿವೆ. ಇಲ್ಲಿ ಜನಿಸುವ ಜನರು ಮೌಲ್ಯಗಳನ್ನೊಳಗೊಂಡ ಭಾವನಾತ್ಮಕ ಜೀವನ ನಡೆಸುತ್ತಾರೆ. ನಮ್ಮ ದೇಶವು ಉತ್ತಮವಾಗಿ ಅಭಿವೃದ್ಧಿ ಹೊಂದಬೇಕಾದರೆ ವಿದ್ಯಾರ್ಥಿಗಳಲ್ಲಿ ಸತ್ಸಂಸ್ಕಾರ ಹಾಗೂ ಉತ್ತಮ ಗುಣಗಳನ್ನು ಬೆಳೆಸುವುದು ಅಗತ್ಯ ಎಂದು ಬಾರ್ಕೂರಿನ ವಾಗ್ಮಿ ಎನ್.ಆರ್.ದಾಮೋದರ ಶರ್ಮ ಹೇಳಿದರು.
ಹಟ್ಟಿಯಂಗಡಿ ಶ್ರೀ ವೇದಮೂರ್ತಿ ರಾಮಚಂದ್ರ ಭಟ್ಟರ ಸ್ಮರಣಾರ್ಥ ಆರಾಧನೆ ಕಾರ್ಯಕ್ರಮದ ಭಾಗವಾಗಿ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿಶಾಲೆಯ ಸಭಾಂಗಣದಲ್ಲಿ ನಡೆದ ‘ನವಾಮಿ ಶಕ್ತಿಚರಣಮ್’ ವಾತೃವಂದನಾ ಕಾರ್ಯಕ್ರಮದಲ್ಲಿ ವಾತನಾಡಿದರು.
ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿಗಳ ಪಾದ ತೊಳೆದು, ಆರತಿ ಬೆಳಗಿ, ಗೌರವಿಸಿದರು.
ಶ್ರೀ ಸಿದ್ಧಿಶೈಕ್ಷಣಿಕ ಪ್ರತಿಷ್ಠಾನ ಕಾರ್ಯದರ್ಶಿ ಹಾಗೂ ಶಾಲಾ ಪ್ರಾಂಶುಪಾಲ ಶರಣ ಕುವಾರ, ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮಿ ಎಂ., ಶಾಲಾ ಉಪಪ್ರಾಂಶುಪಾಲ ರಾಮ ದೇವಾಡಿಗ, ಶಿಕ್ಷಕ ಮತ್ತು ಶಿಕ್ಷಕೇತರರು ಉಪಸ್ಥಿತರಿದ್ದರು.