ಸಂಘಗಳಿಂದ ಮಕ್ಕಳಲ್ಲಿ ನಾಯಕತ್ವ ಗುಣ ವೃದ್ಧಿ

 ಮುದ್ರಾಡಿ ಎಂಎನ್ ಡಿಎಸ್‌ಎಂ ಅನುದಾನಿತ ಪ್ರೌಢಶಾಲೆಯಲ್ಲಿ ವಿವಿಧ ಸಂಘಗಳನ್ನು ಉದ್ಘಾಟಿಸಲಾಯಿತು. ಪ್ರಮುಖರಾದ ನಾರಾಯಣ, ಬಲ್ಲಾಡಿ ಚಂದ್ರಶೇಖರ ಭಟ್, ರುಪತಿ ಹೆಬ್ಬಾರ್ ಮೊದಲಾದವರಿದ್ದರು.
ಮುದ್ರಾಡಿ ಎಂಎನ್ ಡಿಎಸ್‌ಎಂ ಅನುದಾನಿತ ಪ್ರೌಢಶಾಲೆಯಲ್ಲಿ ವಿವಿಧ ಸಂಘಗಳನ್ನು ಉದ್ಘಾಟಿಸಲಾಯಿತು. ಪ್ರಮುಖರಾದ ನಾರಾಯಣ, ಬಲ್ಲಾಡಿ ಚಂದ್ರಶೇಖರ ಭಟ್, ರುಪತಿ ಹೆಬ್ಬಾರ್ ಮೊದಲಾದವರಿದ್ದರು.
Published on
ಹೆಬ್ರಿ: ವಿದ್ಯಾರ್ಥಿ ಸರ್ಕಾರ ಸಹಿತ ಶಾಲೆಯಲ್ಲಿ ಅಸ್ತಿತ್ವದಲ್ಲಿರುವ ವಿವಿಧ ಸಂಗಳು ಮಕ್ಕಳಲ್ಲಿ ನಾಯಕತ್ವ ಗುಣ, ಪರಿಸರ ಕಾಳಜಿ, ಜವಾಬ್ದಾರಿ ಹೊರುವ ಸಾಮರ್ಥ್ಯ, ಪ್ರತಿಭೆಗೆ ಸೂಕ್ತ ವೇದಿಕೆಯನ್ನು ಒದಗಿಸಿಕೊಟ್ಟು ವಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ ಎಂದು ಮುದ್ರಾಡಿ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ನಾರಾಯಣ ಹೇಳಿದರು.
ಮುದ್ರಾಡಿ ಎಂಎನ್ ಡಿಎಸ್‌ಎಂ ಅನುದಾನಿತ ಪ್ರೌಢಶಾಲೆಯಲ್ಲಿ ವಿವಿಧ ಸಂಗಳನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಸರ್ಕಾರದ ಕಾರ್ಯಚಟುವಟಿಕೆಗಳ ಬಗ್ಗೆ ರಘುಪತಿ ಹೆಬ್ಬಾರ್ ಮಾತನಾಡಿದರು. ಶೈಕ್ಷಣಿಕ ವೃತ್ತಿ ವಾರ್ಗದರ್ಶನ ಹಾಗೂ ಆಪ್ತ ಸವಾಲೋಚನ ಟಕ, ಕಲ್ಪನಾ ಪರಿಸರ ಸಂ, ಕನ್ನಡ ಸಾಹಿತ್ಯ ಸಂ, ವಿಜ್ಞಾನ ಮತ್ತು ಆರೋಗ್ಯ ಸಂಘ, ನೇತಾಜಿ ಮತದಾರರ ಸಾಕ್ಷರತಾ ಕ್ಲಬ್‌ಗಳ ಕಾರ್ಯಚಟುವಟಿಕೆಗಳ ಬಗ್ಗೆ ಶಿಕ್ಷಕ ಪಿ.ವಿ.ಆನಂದ ಮಾತನಾಡಿದರು.
ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ವಿದ್ಯಾರ್ಥಿವೇತನ ಪಡೆಯಲು ಅರ್ಹತೆ ಪಡೆದ ಸಾನ್ವಿತ್ ಅವರನ್ನು ಸನ್ಮಾನಿಸಲಾಯಿತು. ರಕ್ಷಕ ಶಿಕ್ಷಕ ಸಮಿತಿ ಅಧ್ಯಕ್ಷ ಪ್ರತಿವಾ ದೇವಾಡಿಗ, ವಿದ್ಯಾರ್ಥಿ ನಾಯಕ ಪ್ರತೀಕ್ ವಾತನಾಡಿದರು. ಶಿಕ್ಷಕಿಯರಾದ ಶ್ಯಾಮಲಾ, ಅನುಷಾ, ಶಿಕ್ಷಕೇತರ ಸಿಬ್ಬಂದಿ ಮಹೇಶ್ ಸಹಕರಿಸಿದರು. ವಂಶಿಕಾ, ಪ್ರತಿಜ್ಞಾ, ಸಹನಾ ಪ್ರಾರ್ಥಿಸಿದರು. ಅಂಜಲಿ ನಿರೂಪಿಸಿದರು. ಶೋಭಿತ್ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net