ಸಮುದಾಯದ ಸಮಸ್ಯೆಗೆ ಸ್ಪಂದಿಸಲು ಇಲಾಖೆ ಸಿದ್ಧ

 ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ನಡೆದ ಎಸ್‌ಸಿ-ಎಸ್‌ಟಿ ವಾಸಿಕ ಸಭೆಯಲ್ಲಿ ಎಸ್‌ಐ ಸುತೇಶ್ ಮಾತನಾಡಿದರು. ವೃತ್ತ ನಿರೀಕ್ಷಕ ರವಿ ಬಿ.ಎಸ್., ಭವ್ಯಾ ಸಿ.ಎಚ್., ಪ್ರಸನ್ನಕುವಾರ್ ಇತರರಿದ್ದರು.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ನಡೆದ ಎಸ್‌ಸಿ-ಎಸ್‌ಟಿ ವಾಸಿಕ ಸಭೆಯಲ್ಲಿ ಎಸ್‌ಐ ಸುತೇಶ್ ಮಾತನಾಡಿದರು. ವೃತ್ತ ನಿರೀಕ್ಷಕ ರವಿ ಬಿ.ಎಸ್., ಭವ್ಯಾ ಸಿ.ಎಚ್., ಪ್ರಸನ್ನಕುವಾರ್ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಪರಿಶಿಷ್ಟ ಜಾತಿ, ಪಂಗಡಗಳ ಸಮುದಾಯದವರ ಸಮಸ್ಯೆಗಳಿಗೆ ಸ್ಪಂದಿಸಲು ಪೊಲೀಸ್ ಇಲಾಖೆ ದಿನದ 24 ಗಂಟೆಯೂ ತೆರೆದಿದ್ದು, ಸಮಸ್ಯೆಗಳಿಗೆ ತುತ್ತಾದವರು ಯಾವ ಹೊತ್ತಿನಲ್ಲಾದರೂ ಠಾಣೆಯನ್ನು ಸಂಪರ್ಕಿಸಬಹುದು. ಸ್ವಾತಂತ್ರೃ ಬಂದು ಅನೇಕ ವರ್ಷಗಳಾದರೂ ಹಿಂದುಳಿದಿರುವ ಈ ಸಮುದಾಯಕ್ಕೆ ಮುಖಂಡರು ನೆರವಾಗಬೇಕು ಎಂದು ಬೆಳ್ತಂಗಡಿ ಗ್ರಾವಾಂತರ ಠಾಣೆ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್. ಹೇಳಿದರು.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಭಾನುವಾರ ನಡೆದ ಬೆಳ್ತಂಗಡಿ ಪೊಲೀಸ್ ಉಪವಿಭಾಗದ ಉಪ್ಪಿನಂಗಡಿ ವೃತ್ತ ವ್ಯಾಪ್ತಿಯ ಎಸ್ಸಿ-ಎಸ್ಟಿ ವಾಸಿಕ ಸಭೆಯಲ್ಲಿ ಮಾತನಾಡುತ್ತಿದ್ದರು.
ಸಮುದಾಯದ ಮುಖಂಡ ಸೇಸಪ್ಪ ನೆಕ್ಕಿಲು ವಾತನಾಡಿ, ಬೇರೆ ಸಮುದಾಯದವರು ತಮ್ಮೊಳಗಿನ ಜಾಗದ ವಿವಾದ ಮತ್ತಿತರ ಸಮಸ್ಯೆಗಳಿಗೆ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಸುಳ್ಳು ಪೊಲೀಸ್ ಕೇಸ್ ಹಾಕಿಸಲು ನಮ್ಮ ಸಮುದಾಯದವರನ್ನು ಬಳಸಿಕೊಂಡು ವಂಚಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸವಾಜಕಲ್ಯಾಣ ಇಲಾಖೆಯ ದ್ವಿತೀಯ ದರ್ಜೆ ಸಹಾಯಕಿ ಭವ್ಯಾ ಸಿ.ಎಚ್., ಮಂಗಳೂರು ಪೊಲೀಸ್ ಠಾಣೆಯ ಡಿಸಿಆರ್‌ಇ ಪ್ರಸನ್ನಕುವಾರ್, ದಯಾನಂದ, ಕೇಶವ, ಜಗ್ಗ, ಬಾಬು, ರವಿ, ಮೋನಪ್ಪ, ಸುಮಿತ್ರಾ, ರಕ್ಷಿತಾ, ದೀಕ್ಷಿತ್, ಲೊಕೇಶ್, ರಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು.
ಉಪ್ಪಿನಂಗಡಿ ಠಾಣೆ ಉಪನಿರೀಕ್ಷಕ ಸುತೇಶ್ ಕೆ.ಪಿ. ಸ್ವಾಗತಿಸಿದರು. ಕಡಬ ಠಾಣೆ ಉಪನಿರೀಕ್ಷಕ ಜಂಬೂರಾಜ್ ಮಹಾಜನ್ ವಂದಿಸಿದರು.

ಸರ್ಕಾರದಿಂದ ಅನೇಕ ಸೌಲಭ್ಯಗಳು ದೊರಕಿದರೂ ಎಸ್.ಸಿ/ ಎಸ್.ಟಿ ಸಮುದಾಯದ ಕೆಲವು ಕಾಲನಿಗಳು ಇನ್ನೂ ಅಭಿವೃದ್ಧಿಯಾಗಿಲ್ಲ. ಬುದ್ಧಿವಂತರ ಜಿಲ್ಲೆಯೆನಿಸಿದ ದಕ್ಷಿಣ ಕನ್ನಡದಲ್ಲಿ ಈ ರೀತಿ ಇರುವುದು ಖೇದಕರ. ಸಮುದಾಯದ ಮುಖಂಡರು ತಮ್ಮ ಸುತ್ತಮುತ್ತಲಿನ ಕಾಲನಿಗಳಲ್ಲಿ ಜಾಗೃತಿ ಮೂಡಿಸಿ ಅವರನ್ನು ಪರಿವರ್ತಿಸಬೇಕು.

— ರವಿ ಬಿ.ಎಸ್., ವೃತ್ತ ನಿರೀಕ್ಷಕ, ಬೆಳ್ತಂಗಡಿ ಗ್ರಾಮಾಂತರ ಠಾಣೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net