ನಾಡ, ಹಕ್ಲಾಡಿ, ವಂಡ್ರೆ, ಚಿತ್ತೂರು, ಕೆರಾಡಿ, ಆಜ್ರಿ, ಆಲೂರು, ಹೊಸೂರು ಹೀಗೆ ಬಹುತೇಕ ಕಾಡಂಚಿನ ಪ್ರದೇಶಗಳಲ್ಲಿ ಕಾಡು ಹಂದಿಗಳು ಅಲ್ಲಲ್ಲಿ ಬಿದ್ದು ಸಾಯುತ್ತಿವೆ. ನಾಡ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಡು ಹಂದಿಗಳು ಸತ್ತಿವೆ ಎನ್ನಲಾಗುತ್ತಿದೆ. ಕಾಡು ಹಂದಿಗಳು ಹೆಚ್ಚು ರೋಗನಿರೋಧಕ ಶಕ್ತಿ ಉಳ್ಳ ಗಟ್ಟಿಯಾದ ದೇಹ ರಚನೆ ಹೊಂದಿರುತ್ತವೆ. ಆದರೆ ಅವುಗಳು ದಿಢೀರ್ ಕೆಲವೆಡೆ ಸಂಶಯಾಸ್ಪದವಾಗಿ ಸಾವಿಗೀಡಾಗುತ್ತಿರುವುದು ಜನಸಾಮಾನ್ಯರ ಆತಂಕಕ್ಕೆ ಕಾರಣವಾಗಿದೆ.