ಗಿಡಗಳಿಗೆ ಕಸಿ ಮಾಡುವುದು ವಿಶೇಷ ಕಲೆ

ಉಡುಪಿ ಪರ್ಕಳದ ಸಸ್ಯವನದಲ್ಲಿ ಗಿಡಗಳಿಗೆ ಕಸಿ ಮಾಡುವ ವಿಧಾನದ ಕುರಿತು ರೊ. ಅಶೋಕ್​ ನಾಯಕ್​ ಪ್ರಾತ್ಯಕ್ಷಿಕೆ ನಡೆಸಿದರು. ರೊ.ಸಂದೀಪಕುಮಾರ್​, ರೊ.ಮಂಜುನಾಥ್​ ಉಪಾಧ್ಯಾಯ, ರೊ.ಗುರುಪ್ರಸಾದ್​ ಕಾಮತ್​, ರೊ.ಪ್ರಭಾಕರ್​ ಶೆಟ್ಟಿ, ರೊ.ಕೃಷ್ಣಪ್ಪ, ರೊ.ಸುಕೇಶ್​ ಕುಂದರ್​, ರೊ.ರಾಜೇಶ್​ ಡಿ. ಶೆಣೈ, ಲಕ್ಷ್ಮೀ ನಾಯ್ಕ್​, ಶಾರದಾ ಇತರರಿದ್ದರು.

Published on

* ರೊ. ಅಶೋಕ್​ ನಾಯಕ್​ ಅಭಿಪ್ರಾಯ

* ಪರ್ಕಳದಲ್ಲಿ ಏರ್​ ಲೇಯರಿಂಗ್​ ಪ್ರಾತ್ಯಕ್ಷಿಕೆ

ಉಡುಪಿ: ಗಿಡಗಳ ಕಸಿ ಮಾಡುವುದು ಹೇಗೆಂದು ಇಂದಿನ ಜನರಿಗೆ ತಿಳಿದಿಲ್ಲ. ವೃಕ್ಷದ ಯಾವ ಭಾಗದಲ್ಲಿ ಕಸಿ ಮಾಡಬೇಕು, ಕಸಿ ಕಟ್ಟುವ ವಿಧಾನ ಹೇಗೆ, ಏರ್​ ಲೇಯರಿಂಗ್​ ಕ್ರಮ ಹೇಗಿರುತ್ತದೆ ಮತ್ತು ಕಸಿ ಮಾಡಿದ ಗಿಡಗಳನ್ನು ಉತ್ತಮ ರೀತಿಯಲ್ಲಿ ಬೆಳೆಸುವುದು ಹೇಗೆಂಬ ಜ್ಞಾನ ಅಗತ್ಯ. ಕಸಿ ಮಾಡುವುದೂ ಸಹ ಒಂದು ಕಲೆಯೇ ಆಗಿದೆ ಎಂದು  ಸಂಪನ್ಮೂಲ ವ್ಯಕ್ತಿ ರೊ. ಅಶೋಕ್​ ನಾಯಕ್​ ಅಭಿಪ್ರಾಯಪಟ್ಟರು.
ಉಡುಪಿಯ ಪರ್ಕಳದ  ಐಸಿರಿ ಸಸ್ಯವನದ ವಠಾರದಲ್ಲಿ ರೋಟರಿ ಐಸಿರಿ ಪರ್ಕಳ ಹಾಗೂ ರೋಟರಿ ಸಮುದಾಯ ದಳ ಐಸಿರಿ ಆಶ್ರಯದಲ್ಲಿ ಆಯೋಜಿಸಿದ್ದ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಕಸಿ ಪ್ರಾತ್ಯಕ್ಷಿಕೆ ನಡೆಸಿ ಮಾತನಾಡಿದರು.

ರೋಟರಿ ಐಸಿರಿ ಅಧ್ಯಕ್ಷ ರೊ.ಸಂದೀಪಕುಮಾರ್​, ರೋಟರಿ ಲೀಡರ್​ಶಿಪ್​ ಇನ್​ಸ್ಟಿಟ್ಯೂಟ್​ ಜಿಲ್ಲಾ ಸಭಾಪತಿ ರೊ.ಮಂಜುನಾಥ್​ ಉಪಾಧ್ಯಾಯ, ಸ್ಟೀವರ್ಡ್​ಶಿಪ್​ ಉಪಸಮಿತಿಯ ಜಿಲ್ಲಾ ಉಪಸಭಾಪತಿ ರೊ.ಗುರುಪ್ರಸಾದ್​ ಕಾಮತ್​, ಸಮುದಾಯ ಸೇವಾ ನಿರ್ದೇಶಕ ರೊ.ಪ್ರಭಾಕರ್​ ಶೆಟ್ಟಿ, ಯುವಜನ ಸೇವಾ ನಿರ್ದೇಶಕ ರೊ.ಕೃಷ್ಣಪ್ಪ, ಆರ್​ಸಿಸಿ ಕೋ-ಆರ್ಡಿನೇಟರ್​ ರೊ.ಸುಕೇಶ್​ ಕುಂದರ್​, ಕಾರ್ಯದರ್ಶಿ ರೊ. ರಾಜೇಶ್​ ಡಿ. ಶೆಣೈ, ಆರ್​ಸಿಸಿ ಐಸಿರಿ ಅಧ್ಯಕ್ಷೆ ಲಕ್ಷ್ಮೀ ನಾಯ್ಕ್​ ಹಾಗೂ ಕಾರ್ಯದರ್ಶಿ ಶಾರದಾ ಉಪಸ್ಥಿತರಿದ್ದರು.

ಕಸಿ ಮಾಡಿದ ಗಿಡಗಳಿಂದ ಆರು ತಿಂಗಳಿಂದ ವರ್ಷದೊಳಗೆ ಫಲ ಪಡೆಯುವ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಲಾಯಿತು. ರೊ. ರಾಜೇಶ್​ ಡಿ. ಶೆಣೈ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net