ಕುಂದಾಪುರದಲ್ಲಿ ಮೆಡಿಕಲ್​ ಕಾಲೇಜು ಪ್ರಾರಂಭಿಸಲು ಒತ್ತಾಯ

ವಿಪ ಸದಸ್ಯ ಮಂಜುನಾಥ ಭಂಡಾರಿ
ವಿಪ ಸದಸ್ಯ ಮಂಜುನಾಥ ಭಂಡಾರಿ
Published on
ಉಡುಪಿ: ಜಿಲ್ಲೆಯ ಬಡಜನರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಗೊಂದು ಮೆಡಿಕಲ್​ ಕಾಲೇಜು ಎಂಬ ಸರ್ಕಾರದ ನೀತಿಯಂತೆ ಯಾವುದೇ ಸರ್ಕಾರಿ ಮೆಡಿಕಲ್​ ಕಾಲೇಜು ಹೊಂದಿರದ ಉಡುಪಿ ಜಿಲ್ಲೆಯ ಕುಂದಾಪುರ- ಬೈಂದೂರು ಭಾಗದಲ್ಲಿ ಮೆಡಿಕಲ್​ ಕಾಲೇಜು ಸ್ಥಾಪನೆಗಾಗಿ ಮುಂದಿನ ಬಜೆಟ್​ನಲ್ಲಿ ಅನುದಾನ ಕಾಯ್ದಿರಿಸಲು ಕ್ರಮಕೈಗೊಳ್ಳಬೇಕು ಎಂದು ವಿಪ ಸದಸ್ಯ ಮಂಜುನಾಥ ಭಂಡಾರಿ ಶೂನ್ಯವೇಳೆಯಲ್ಲಿ ಆಗ್ರಹಿಸಿದ್ದಾರೆ.
ಕುಂದಾಪುರದಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಹಾಗೂ ತಾಯಿ ಮಕ್ಕಳ ಆಸ್ಪತ್ರೆ ಇದೆ. ವೈದ್ಯಕಿಯ ವ್ಯವಸ್ಥೆ ಚೆನ್ನಾಗಿದ್ದು, ಅತಿ ಹೆಚ್ಚು ಹೆರಿಗೆ ಆಗುವ ಆಸ್ಪತ್ರೆ ಎಂದು ಗುರುತಿಸಿಕೊಂಡಿದೆ. ಆದ್ದರಿಂದ ಕುಂದಾಪುರ ತಾಲೂಕಿನಲ್ಲಿ ಮೆಡಿಕಲ್​ ಕಾಲೇಜು ಮಾಡಿದರೆ ಸರ್ಕಾರಕ್ಕೆ ಸುಲಭವಾಗಲಿದೆ. ಈಗಾಗಲೇ ಬೈಂದೂರು, ಹೆಬ್ರಿ, ಭಟ್ಕಳ, ಶಿರೂರು ಮೊದಲಾದೆಡೆಯಿಂದಲೂ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ರೋಗಿಗಳು ಬರುತ್ತಾರೆ. ಜತೆಗೆ ಉತ್ತರ ಕನ್ನಡದಿಂದಲೂ ಇಲ್ಲಿಗೆ ಚಿಕಿತ್ಸೆಗೆ ಆಗಮಿಸುವವರಿದ್ದಾರೆ. ಕುಂದಾಪುರವು ಜಿಲ್ಲಾ ಉಪವಿಭಾಗ ಕೇಂದ್ರವಾದ ಕಾರಣ ದ.ಕ. ಜಿಲ್ಲೆಯ ಉಪವಿಭಾಗ ಕೇಂದ್ರ ಪುತ್ತೂರಿಗೆ ಮಂಜೂರಾದಂತೆ ಇಲ್ಲಿಗೂ ಮೆಡಿಕಲ್​ ಕಾಲೇಜು ಬೇಕು ಎಂಬ ಬೇಡಿಕೆ ನ್ಯಾಯಸಮ್ಮತವಾಗಿದೆ ಎಂದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net