ಮಂಗಳೂರು, ಕುಂದಾಪುರ ಮತ್ತು ಕಾರ್ಕಳ ಭಾಗಗಳಿಗೆ ಉದ್ಯೋಗಕ್ಕಾಗಿ ತೆರಳುವವರು ತಮ್ಮ ವಾಹನಗಳನ್ನು ದಿನಪೂರ್ತಿ ನಿಲ್ಲಿಸಲು ಸ್ಥಳವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಹಿರಿಯ ನಾಗರಿಕರು, ಸಣ್ಣ ವ್ಯಾಪಾರಿಗಳು, ಹೂವು-ಹಣ್ಣು ವ್ಯಾಪಾರಿಗಳಿಗೂ ಈ ಸಮಸ್ಯೆ ದೊಡ್ಡ ತಲೆನೋವಾಗಿದೆ. ನಗರದಲ್ಲಿ ವಾಣಿಜ್ಯ ಕಟ್ಟಡದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿ ಜಾರಿಯಾಗಿಲ್ಲ. ಅನೇಕ ಕಟ್ಟಡಗಳಲ್ಲಿ ವಾಹನ ನಿಲುಗಡೆಗಾಗಿ ಮೀಸಲಾಗಿದ್ದ ನೆಲಮಾಳಿಗೆಗಳು ನಂತರ ಅಂಗಡಿಗಳಾಗಿ ಮಾರ್ಪಟ್ಟಿವೆ. ವೇಗವಾಗಿ ಬೆಳೆಯುತ್ತಿರುವ ಉಡುಪಿ ನಗರಕ್ಕೆ ಈಗ ಅಗತ್ಯವಿರುವುದು ಮತ್ತೊಂದು ವಾಣಿಜ್ಯ ಸಂಕೀರ್ಣವಲ್ಲ. ಬದಲಿಗೆ ಸುಸಜ್ಜಿತವಾದ ಪಾರ್ಕಿಂಗ್ ವ್ಯವಸ್ಥೆ. ಹಾಗಾಗಿ ನೆಲ್ಲಿಕಟ್ಟೆಯಲ್ಲಿರುವ ಸರ್ಕಾರಿ ಜಾಗವನ್ನು ಸಂಪೂರ್ಣ ಪೇಯ್ಡ್ ಪಾರ್ಕಿಂಗ್ಗೆ ಮೀಸಲಿಟ್ಟರೆ ನಗರದ ಸಂಚಾರ ಸಮಸ್ಯೆಗೆ ದೊಡ್ಡ ಮಟ್ಟದ ಪರಿಹಾರ ದೊರೆಯಬಹುದು ಎಂದು ತಿಳಿಸಿದರು.