ಆಟೋರಿಕ್ಷಾ ಮಜ್ದೂರ್ ಸಂಘ ಕುಂಬಳೆ ಯೂನಿಟ್ ಸಭೆ ನಡೆಯಿತು. ಸಮಿತಿ ಉಪಾಧ್ಯಕ್ಷ ಸುನೀಲ್, ಜಿಲ್ಲಾ ಜತೆ ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ ಮೊದಲಾದವರಿದ್ದರು.
Published on:
Copied
Follow Us
ಕುಂಬಳೆ: ಆಟೋರಿಕ್ಷಾ ಮಜ್ದೂರ್ ಸಂಘ ಕುಂಬಳೆ ಘಟಕದ ಸಭೆ ಕುಂಬಳೆ ಜಯ ಮಾರುತಿ ವ್ಯಾಯಾಮ ಶಾಲೆಯಲ್ಲಿ ಸಮಿತಿ ಉಪಾಧ್ಯಕ್ಷ ಸುನೀಲ್ ಅಧ್ಯಕ್ಷತೆಯಲ್ಲಿ ನಡೆಯಿತು.
ಕುಂಬಳೆ ನಗರದಲ್ಲಿ ಪದೇಪದೆ ಬಸ್ ನಿಲ್ದಾಣ ಬದಲಾವಣೆ ಮಾಡಿ ಜನರಿಗೆ ಹಾಗೂ ಆಟೋ ಕಾರ್ಮಿಕರಿಗೆ ತೊಂದರೆ ಕೊಡುವುದನ್ನು ಕೊನೆಗೊಳಿಸಬೇಕು. ಕುಂಬಳೆ ನಗರದಲ್ಲಿ ಆಟೋಗಳ ಸಂಖ್ಯೆ ಹೆಚ್ಚಾಗದಂತೆ ಕಡಿವಾಣ ಹಾಕಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.
ಕಳೆದ ಕೆಲವು ವರ್ಷಗಳಿಂದ ಕುಂಬಳೆ ನಗರದಲ್ಲಿ ಶಾಶ್ವತ ಸುಸಜ್ಜಿತ ಬಸ್ ನಿಲ್ದಾಣ ಇಲ್ಲದೆ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಪಂಚಾಯಿತಿ ಅಧಿಕಾರಿಗಳು ಬಸ್ ನಿಲ್ದಾಣ ಕಾಂಪ್ಲೆಕ್ಸ್ ನಿರ್ಮಾಣ ಮಾಡದೆ ಜನರನ್ನು ವಂಚಿಸುತ್ತಿದ್ದಾರೆ. ಕುಂಬಳೆಗೆ ಬರುವ ಜನರಿಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಬಿಎಂಎಸ್ ಜಿಲ್ಲಾ ಜತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಅಭಿಪ್ರಾಯಪಟ್ಟರು.
ಜಿಲ್ಲಾ ಜತೆ ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ, ಪಂಚಾಯಿತಿ ಸಮಿತಿ ಅಧ್ಯಕ್ಷ ಶಿವಾನಂದ ರಾವ್, ಕುಂಬಳೆ ಯೂನಿಟ್ ಕಾರ್ಯದರ್ಶಿ ದಿವಾಕರ ರೈ ಉಜಾರ್, ಭೋಜರಾಜ್ ಬೆಜಪ್ಪೆ ಮಾತನಾಡಿದರು. ದಿವಾಕರ ರೈ ಉಜಾರ್ ವಂದಿಸಿದರು.
12ರಂದು ತಾಲೂಕು ಕಚೇರಿಗೆ ಮುತ್ತಿಗೆ
ಆಟೋ ದರ ಹೆಚ್ಚಿಸಬೇಕೆಂದು ಆಗ್ರಹಿಸಿ ಜೂ.12ರಂದು ಕಾಸರಗೋಡು ತಾಲೂಕು ಕಚೇರಿಗೆ ಆಟೋರಿಕ್ಷಾ ಮಜ್ದೂರ್ ಸಂಘ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆಸುವ ಮುತ್ತಿಗೆಗೆ ಹೆಚ್ಚಿನ ಸಂಖೆಯಲ್ಲಿ ಆಟೋ ಚಾಲಕರು ಭಾಗವಹಿಸಬೇಕೆಂದು ಸಭೆಯಲ್ಲಿ ತಿಳಿಸಲಾಯಿತು.