ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2000ನೇ ಇಸವಿಯಲ್ಲಿ ಕೆ.ಎಲ್.ಆರ್ ಆಕ್ಟ್ 46ರ ತಿದ್ದುಪಡಿಯಂತೆ ಪರವಾನಗಿ ಭೂಮಾಪಕರನ್ನು ಇಲಾಖೆಗೆ ಪರಿಚಯಿಸಲಾಯಿತು. ತದನಂತರ 2002 ರಲ್ಲಿ ಸುಮಾರು 800 ರಿಂದ 1000 ಪರವಾನಗಿ ಭೂಮಾಪಕರಿಗೆ ನಿಯಮಾನುಸಾರ ಇಲಾಖೆಯಲ್ಲೇ ತರಬೇತಿ ನೀಡಿ, ಜಿಲ್ಲಾವಾರು ಕೆಲಸ ನಿರ್ವಹಿಸಲು ಅನುವು ಮಾಡಿಕೊಡಲಾಗಿತ್ತು. ಅಂದಿನಿಂದ ಇಂದಿನವರೆಗೆ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಸುಮಾರು 7500 ಪರವಾನಗಿ ಭೂಮಾಪಕರ ಪೈಕಿ, ಸದ್ಯ 5000ಕ್ಕೂ ಹೆಚ್ಚು ಭೂಮಾಪಕರು ಸಕ್ರಿಯವಾಗಿ ಇಲಾಖಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.