ಅಪಾಯಕಾರಿ ಮರಗಳ ತೆರವಿಗೆ ಒತ್ತಾಯ

 ಹೆಬ್ರಿ- ಕುಂದಾಪುರ ರಸ್ತೆಯ ಬೇಳಂಜೆ ಸಮೀಪ ವಾಲಿರುವ ಮರಗಳು.
ಹೆಬ್ರಿ- ಕುಂದಾಪುರ ರಸ್ತೆಯ ಬೇಳಂಜೆ ಸಮೀಪ ವಾಲಿರುವ ಮರಗಳು.
Published on

ನರೇಂದ್ರ ಎಸ್.ಮರಸಣಿಗೆ ಹೆಬ್ರಿ

ಹೆಬ್ರಿ- ಬ್ರಹ್ಮಾವರ ರಸ್ತೆಯಲ್ಲಿನ ಅಪಾಯಕಾರಿ ಮರಗಳ ತೆರವಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ರಸ್ತೆ ಇಕ್ಕೆಲಗಳ ಅಪಾಯಕಾರಿ ಮರಗಳನ್ನು ತೆರವು ವಾಡಲು ಲಿಖಿತ ಮನವಿ ನೀಡಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ವಾರ್ಗದಲ್ಲಿ ಹೋಗುವವರು ಜೀವ ಕಳೆದುಕೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಅಸವಾಧಾನ ವ್ಯಕ್ತಪಡಿಸಿದ್ದಾರೆ.
ಅಪಾಯಕಾರಿ ಮರಗಳ ತೆರವಿಗೆ ಸಾವಾಜಿಕ ಹೋರಾಟಗಾರ ಕುಳ್ಳೂರು ಶ್ರೀಕಾಂತ್ ಪೂಜಾರಿ, ಬೇಳಂಜೆ ರವಿ, ಮುದ್ರಾಡಿ ಪ್ರಶಾಂತ್ ಪೈ ಹಾಗೂ ಹೆಬ್ರಿ ರೆಡ್‌ಕ್ರಾಸ್ ಸೊಸೈಟಿ ವತಿಯಿಂದ ಅರಣ್ಯಾಧಿಕಾರಿಗಳಿಗೆ ಮನವಿ ನೀಡಲಾಗಿತ್ತು. ಕಾರ್ಕಳ ರಸ್ತೆ, ಹೆಬ್ರಿ- ಕುಂದಾಪುರ ರಸ್ತೆ, ಹೆಬ್ರಿ- ಬ್ರಹ್ಮಾವರ ರಸ್ತೆ, ಹೆಬ್ರಿ- ಆಗುಂಬೆ ರಾಷ್ಟ್ರೀಯ ಹೆದ್ದಾರಿ ಸೇರಿ ಎಲ್ಲ ರಸ್ತೆಗಳ ಇಕ್ಕೆಲಗಳಲ್ಲಿ ಬೀಳುವ ಹಂತದ, ರಸ್ತೆಗೆ ಬಾಗಿರುವ, ಸತ್ತು ಹೋಗಿರುವ ಅಪಾಯಕಾರಿ ಮರಗಳಿದ್ದು, ಅವುಗಳನ್ನು ಅರಣ್ಯ ಇಲಾಖೆಯವರೇ ಸ್ವಯಂಪ್ರೇರಿತವಾಗಿ ತೆರವು ವಾಡಬೇಕೆಂದು ಒತ್ತಾಯಿಸಿದ್ದಾರೆ.

ರಸ್ತೆ ಪಕ್ಕದಲ್ಲಿ ಇತ್ತೀಚೆಗೆ ವಾರಾಹಿ ನೀರು ಸರಬರಾಜು ಮತ್ತು ಜಲಜೀವನ್ ಮಿಷನ್ ನೀರಿನ ಯೋಜನೆಗಾಗಿ ದೊಡ್ಡ ಗಾತ್ರದ ಪೈಪ್‌ಲೈನ್ ವಾಡಲು ಬೃಹತ್ ಕಾಲುವೆ ತೋಡಿ ಪೈಪ್ ಹಾಕಲಾಗಿದೆ. ಇದರಿಂದ ಮರಗಳ ಬುಡಗಳು ಅಗೆದ ಮಣ್ಣಿನಿಂದ ಗಟ್ಟಿಯಾಗಿರದೆ ವಾಲಿದ ಮರಗಳು ಬೀಳುತ್ತಿವೆ. ವಲಯ ಅರಣ್ಯಾಧಿಕಾರಿಗಳ ಹಂತದಲ್ಲೇ ಅಪಾಯಕಾರಿ ಮರಗಳ ಸರ್ವೇ ನಡೆಸಿ ಸ್ವಯಂಪ್ರೇರಿತವಾಗಿ ಅಪಾಯಕಾರಿ ಮರಗಳು ತೆರವು ವಾಡಿ ಅವಾಯಕ ಜೀವಗಳನ್ನು ಉಳಿಸಬೇಕು.

— ಮಿಥುನ್ ಶೆಟ್ಟಿ ಚಾರ ಪ್ರಗತಿಪರ ಹೋರಾಟಗಾರ

ನಾವು ಅಪಾಯಕಾರಿ ಮರಗಳ ತೆರವಿನ ಬಗ್ಗೆ ನಿರಂತರವಾಗಿ ಸಂಬಂಧಪಟ್ಟವರಿಗೆ ವಾಹಿತಿ ನೀಡಿದ್ದೇವೆ. ಹೋದ ಜೀವವನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ಮುಂದೆ ಈ ರೀತಿಯ ಯಾವುದೇ ಅವಡಗಳು ಸಂಭವಿಸಬಾರದು. ರಸ್ತೆ ಬದಿ ಇರುವ ಅಪಾಯಕಾರಿ ಮರಗಳನ್ನು ಶ್ರೀವಾಗಿ ತೆರವು ವಾಡಬೇಕು.

— ಶ್ರೀಕಾಂತ್ ಪೂಜಾರಿ ಸಾವಾಜಿಕ ಹೋರಾಟಗಾರ

ಈಗಾಗಲೇ ಕೆಲವೆಡೆ ಅಪಾಯಕಾರಿ ಮರಗಳ ತೆರವು ವಾಡಲಾಗಿದೆ. ಸಮಸ್ಯೆ ತೀವ್ರತೆ ಅರಿತು ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಸಹಕಾರ ನೀಡಬೇಕು.

— ಸಿದ್ದೇಶ್ವರ ಕುಂಬಾರ್ ಹೆಬ್ರಿ ವಲಯ ಅರಣ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net