ಪರಿಸರಸ್ನೇಹಿ ವಸ್ತುಗಳಿಗೆ ಬೇಡಿಕೆ ಅಪಾರ

ಉಡುಪಿಯ ಜಿಲ್ಲಾ ಕಾರಾಗೃಹದಲ್ಲಿ ಆಯೋಜಿಸಿದ್ದ ಕರಕುಶಲ ವಸ್ತು ತಯಾರಿ ಕೌಶಲ ತರಬೇತಿಯಲ್ಲಿ ಪಾಲಗೊಂಡಿದ್ದ ಕೈದಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ನ್ಯಾ.ನಿತಿನ್​ ಯಶ್ವಂತ ರಾವ್​, ಜಗದೀಶ ಪೈ, ಮನೋಹರ ಕಟ್ಗೇರಿ, ಪ್ರತಿಮಾ, ವಿಜಯಕುಮಾರ ದೀಪಸಿಂಗ್​ ಚವ್ಹಾಣ, ಡಿ.ಆರ್​. ಕೋಣಿ, ಎಸ್​.ಎ. ಶಿರೋಳ, ಸಿದ್ದಪ್ಪ ಟಿ. ಕೋಣಿ ಇದ್ದರು.
ಉಡುಪಿಯ ಜಿಲ್ಲಾ ಕಾರಾಗೃಹದಲ್ಲಿ ಆಯೋಜಿಸಿದ್ದ ಕರಕುಶಲ ವಸ್ತು ತಯಾರಿ ಕೌಶಲ ತರಬೇತಿಯಲ್ಲಿ ಪಾಲಗೊಂಡಿದ್ದ ಕೈದಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ನ್ಯಾ.ನಿತಿನ್​ ಯಶ್ವಂತ ರಾವ್​, ಜಗದೀಶ ಪೈ, ಮನೋಹರ ಕಟ್ಗೇರಿ, ಪ್ರತಿಮಾ, ವಿಜಯಕುಮಾರ ದೀಪಸಿಂಗ್​ ಚವ್ಹಾಣ, ಡಿ.ಆರ್​. ಕೋಣಿ, ಎಸ್​.ಎ. ಶಿರೋಳ, ಸಿದ್ದಪ್ಪ ಟಿ. ಕೋಣಿ ಇದ್ದರು.
Published on: 

* ನ್ಯಾಯಾಧೀಶ ನಿತಿನ್​ ಯಶ್ವಂತ ರಾವ್​ ಅಭಿಪ್ರಾಯ

* ಕೈದಿಗಳಿಗೆ ಕರಕುಶಲ ವಸ್ತು ತಯಾರಿ ತರಬೇತಿಯ ಸಮಾರೋಪ

ಉಡುಪಿ: ಇತ್ತೀಚೆಗಿನ ದಿನಗಳಲ್ಲಿ ಪರಿಸರ ಸ್ನೇಹಿ ಕಾರ್ಯ ಚಟುವಟಿಕೆಗಳಿಗೆ ಬಹಳ ಪ್ರಾಮುಖ್ಯತೆ ಲಭಿಸುತ್ತಿದೆ. ಅಂತಹ ಪರಿಕಲ್ಪನೆಯಲ್ಲಿ ತೆಂಗಿನ ಗೆರಟೆ ಅಥವಾ ಚಿಪ್ಪಿನಿಂದ ತಯಾರಿಸುವ ವಿವಿಧ ಕರಕುಶಲ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಉತ್ತಮ ಮಾರುಕಟ್ಟೆಯ ವ್ಯವಸ್ಥೆಯೂ ಲಭಿಸುತ್ತಿದೆ. ಕೈದಿಗಳಿಗೆ ತರಬೇತಿ ನೀಡಿದ್ದು ಅರ್ಥಪೂರ್ಣ ಎಂದು ಹಿರಿಯ ಸಿವಿಲ್​ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನಿತಿನ್​ ಯಶ್ವಂತ ರಾವ್​ ತಿಳಿಸಿದರು.

ಉಡುಪಿ ಹಿರಿಯಡ್ಕದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾಡಳಿತ, ಜಿಪಂ, ಉಡುಪಿ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವೆ ವತಿಯಿಂದ ಮಣಿಪಾಲದ ಭಾರತೀಯ ವಿಕಾಸ ಟ್ರಸ್ಟ್​ (ಬಿವಿಟಿ) ವತಿಯಿಂದ ಆಯೋಜಿಸಿದ್ದ 10 ದಿನದ ತೆಂಗಿನ ಗೆರಟೆ ಕರಕುಶಲ ವಸ್ತುಗಳು ಮತ್ತು ಅಲಂಕಾರಿಕ ಮೌಲ್ಯವರ್ಧಿತ ಉತ್ಪನ್ನಗಳ ಕೌಶಲ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮನೋಬಲ ಹೆಚ್ಚಳ

ಬಿವಿಟಿ ಹಿರಿಯ ಸಹಾಯಕ ಜಗದೀಶ ಪೈ ಮಾತನಾಡಿ, ಇಂತಹ ತರಬೇತಿಯಿಂದ ಕ್ರಿಯಾಶೀಲರಾಗಿ ಗುಂಪು ಚಟುವಟಿಕೆಗಳಲ್ಲಿ ತೊಡಗಿ ಜ್ಞಾನ, ಕೌಶಲ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ. ಕೈದಿಗಳಿಗೆ ಇಂತಹ ತರಬೇತಿ ನೀಡಿದರೆ ಅವರಲ್ಲಿ ಮನೋಬಲ ಹೆಚ್ಚಳಗೊಳ್ಳಲು ಹಾಗೂ ಮತ್ತೆ ಮುಖ್ಯವಾಹಿನಿಗೆ ಬರಲು ಪೂರಕವಾಗಲಿದೆ. ಮುಂದಿನ ದಿನಗಳಲ್ಲಿ ಬ್ಯಾಂಕ್​ ಮತ್ತು ಇತರ ಸಂಸ್ಥೆಗಳ ಮೂಲಕ ನೆರವು ನೀಡಲು ಬಿಬಿಟಿ ಬದ್ಧವಿದೆ ಎಂದರು.

ಬಿವಿಟಿ ಹಿರಿಯ ಸಹಾಯಕ ಜಗದೀಶ ಪೈ ಮಾತನಾಡಿದರು.
ಬಿವಿಟಿ ಹಿರಿಯ ಸಹಾಯಕ ಜಗದೀಶ ಪೈ ಮಾತನಾಡಿದರು.

ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವೆಯ ಅಧೀಕ್ಷಕ ವಿಜಯಕುಮಾರ ದೀಪಸಿಂಗ್​ ಚವ್ಹಾಣ ಅಧ್ಯಕ್ಷತೆ ವಹಿಸಿದ್ದರು. ಗೆರಟೆಯಿಂದ ಕೀಚೈನ್​, ಕಾಫಿ ಕಪ್​, ಸಭೆ-ಸಮಾರಂಭಗಳಲ್ಲಿ ನೀಡಬಹುದಾದ ಸ್ಮರಣಿಕೆಗಳ ತಯಾರಿ ಕುರಿತು ತರಬೇತಿ ನೀಡಲಾಯತು. ಶಿಬಿರದಲ್ಲಿ ಪಾಲ್ಗೊಂಡಿದ್ದ ಜೈಲ್​ನ 32 ಕೈದಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಟ್ರಸ್ಟ್​ನ ಮುಖ್ಯ ವ್ಯವಸ್ಥಾಪಕ ಮನೋಹರ ಕಟ್ಗೇರಿ, ಕಾರ್ಯಕ್ರಮ ಅಧಿಕಾರಿ ಪ್ರತಿಮಾ, ಜೈಲರ್​ಗಳಾದ ಡಿ.ಆರ್​. ಕೋಣಿ ಹಾಗೂ ಎಸ್​.ಎ. ಶಿರೋಳ, ಸಹಾಯಕ ಜೈಲರ್​ ಸಿದ್ದಪ್ಪ ಟಿ. ಕೋಣಿ, ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು. ಕಾರಾಗೃಹದ ಅಧಿಕಾರಿ ವಿನಿತ್​ ಕಾರ್ಯಕ್ರಮ ನಿರೂಪಿಸಿದರು.