ಯೋಧ ಶ್ಯಾಮರಾಜ್‌ಗೆ ಅಗೌರವ ತೋರಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಕೋಟ ಠಾಣೆಯಲ್ಲಿ ಸಭೆ ನಡೆಯಿತು. ಕೋಟ ಠಾಣೆ ಉಪನಿರೀಕ್ಷಕ ಪ್ರವೀಣ್ ಕುವಾರ್ ಆರ್., ಎಸ್‌ಐ ವಾಂತೇಶ್, ವಾಜಿ ಸೈನಿಕ ಕೇಶವ ಮಲ್ಪೆ ಮತ್ತಿತರರು ಇದ್ದರು.
Published on:
Copied
Follow Us
ಕೋಟ: ಯೋಧ ಶ್ಯಾಮರಾಜ್ ಅವರಿಗೆ ಸಾಸ್ತಾನ ಟೋಲ್‌ನಲ್ಲಿ ಅಗೌರವ ತೋರಿದ ಪ್ರಕರಣ ಸಂಬಂಧ ಮಂಗಳವಾರ ಕೋಟ ಠಾಣೆಯಲ್ಲಿ ಕೆ.ಕೆ.ಆರ್.ಕಂಪನಿ ವ್ಯಾನೇಜರ್ ತಿಮ್ಮಯ್ಯ ಹಾಗೂ ನಿವೃತ್ತ ಯೋಧರ ಸಂಘ, ಹೆದ್ದಾರಿ ಜಾಗೃತಿ ಸಮಿತಿಯ ಪ್ರಮುಖರ ಸಮ್ಮುಖದಲ್ಲಿ ಸಭೆ ನಡೆಯಿತು.
ಟೋಲ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮ್ಯಾನೇಜರ್ ತಿಮ್ಮಯ್ಯ ಮಾಜಿ ಸೈನಿಕರಾಗಿದ್ದರೂ ಇನ್ನೊಬ್ಬ ಯೋಧನಿಗೆ ಅಗೌರವ ತೋರಿದ ಟೋಲ್ ಸಿಬ್ಬಂದಿಯನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ನಿವೃತ್ತ ಯೋಧರು ತರಾಟೆಗೆ ತೆಗೆದುಕೊಂಡರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ಮಧ್ಯೆಪ್ರವೇಶಿಸಿದ ಠಾಣಾಧಿಕಾರಿ ಪ್ರವೀಣ್ ಕುವಾರ್ ಪರಿಸ್ಥಿತಿ ತಿಳಿಗೊಳಿಸಿ ವಾತುಕತೆ ನಡೆಸಲು ಸೂಚಿಸಿದರು.
ಟೋಲ್ ಮುಖ್ಯಸ್ಥರು ಸೇರಿದಂತೆ ಹಲವರ ಮೇಲೆ ಪ್ರಕರಣ ದಾಖಲಿಸುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು. ಡಿವೈಎಸ್‌ಪಿ ಪ್ರಭು ಡಿ.ಟಿ. ಭೇಟಿ ನೀಡಿ ಇಂತಹ ಪ್ರಕರಣ ಮರುಕಳಿಸದಂತೆ ನೋಡಿಕೊಳ್ಳಲು ಟೋಲ್‌ನವರಿಗೆ ಸೂಚಿಸಿದರು. ಅಲ್ಲದೆ ಘಟನೆ ಸಂಬಂಧ ಪ್ರಕರಣ ದಾಖಲಿಸುವಂತೆ ನಿರ್ದೇಶನ ನೀಡುವುದಾಗಿ ತಿಳಿಸಿದರು.
ತರಾಟೆ ತೆಗೆದುಕೊಂಡ ಹೆದ್ದಾರಿ ಸಮಿತಿ
ನಿವೃತ್ತ ಸೈನಿಕರಿಗೆ ನ್ಯಾಯ ಒದಗಿಸಬೇಕು. ಅಲ್ಲದೆ ತಿಮ್ಮಯ್ಯ ಸೇರಿದಂತೆ ಹಲವರನ್ನು ವಜಾಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿ ಅಧ್ಯಕ್ಷ ಶ್ಯಾಮಸುಂದರ್ ನಾಯರಿ, ಐರೋಡಿ ವಿಠ್ಠಲ್ ಪೂಜಾರಿ, ಪ್ರತಾಪ್ ಶೆಟ್ಟಿ, ನಾಗರಾಜ್ ಗಾಣಿಗ,ದಿನೇಶ್ ಗಾಣಿಗ ಆಗ್ರಹಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಬ್ದುಲ್ ಜಾವೀದ್, ಜಗನ್‌ಮೋಹನ್ ರೆಡ್ಡಿ, ಟೋಲ್ ವ್ಯಾನೇಜರ್ ಬಾಬು, ಟೋಲ್ ವ್ಯಾನೇಜರ್ ತಿಮ್ಮಯ್ಯ ಹಾಗೂ ಸಿಬ್ಬಂದಿ ಸುರೇಶ್ ಮತ್ತು ಶಿವನಾಗ ಎಂಬುವರ ವಿರುದ್ಧ ನಿವೃತ್ತ ಯೋಧರ ಸಂಘ ಕೋಟ ಠಾಣೆಗೆ ದೂರು ನೀಡಿತು.
ಕೋಟ ಠಾಣೆ ಉಪನಿರೀಕ್ಷಕ ಪ್ರವೀಣ್ ಕುವಾರ್ ಆರ್., ಎಸ್‌ಐ ವಾಂತೇಶ್, ವಾಜಿ ಸೈನಿಕ ಕೇಶವ ಮಲ್ಪೆ, ಉಪಾಧ್ಯಕ್ಷ ಚಂದ್ರ ಅಮೀನ್, ಅಶೋಕ, ಸುರೇಶ್, ರವೀಂದ್ರ ತಿಂಗಳಾಯ, ರತ್ನಾಕರ ಬಾರಿಕೆರೆ, ಕೋಟ ಕೀರ್ತೀಶ್ ಪೂಜಾರಿ ಮತ್ತಿತರರು ಇದ್ದರು.
ದೂರಿನಲ್ಲಿ ಕೆಲವು ಸೆಕ್ಷನ್‌ಗಳು ತಕ್ಷಣವೇ ಪ್ರಕರಣ ದಾಖಲಿಸಲು ಅನ್ವಯವಾಗದ ಕಾರಣ ದೂರು ಸ್ವೀಕರಿಸಲಾಗಿದೆ. ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ವಾಡಿ ವಿಚಾರಣೆ ನಡೆಸಿದ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು.