_1774531702691.webp?w=480&auto=format%2Ccompress&fit=max)
_1774531702691.webp?w=480&auto=format%2Ccompress&fit=max)
ಗ್ರಾ.ಪಂ.ನಲ್ಲಿ ಹೊಸ ಆಡಳಿತ ಸಮಿತಿ ಅಧಿಕಾರಕ್ಕೆ ಬಂದಿದ್ದು, ನಮ್ಮ ತಂಡದ ಮೊದಲ ಸಭೆಯಲ್ಲಿ ಪೂವನುಡ್ಕ ಸೇತುವೆ ಮತ್ತು ಬಾಕಿಲಪದವು ಸೇತುವೆ ನಿರ್ಮಿಸಬೇಕೆಂದು ಜನರು ಆಗ್ರಹಿಸಿದ್ದಾರೆ. ಈ ನಿಟ್ಟಿನಲ್ಲಿ ಗ್ರಾ.ಪಂ. ಆಡಳಿತ ಸಮಿತಿ ಶ್ರೀ ಚಿಂತನೆ ನಡೆಸಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಿದೆ. ಬಾಕಿಲಪದವಲ್ಲಿ ಸೇತುವೆ ನಿರ್ಮಿಸಬೇಕೆಂದು ವಾರ್ಡ್‌ಮಟ್ಟದ ಗ್ರಾಮಸಭೆಯಲ್ಲಿ ಅಲ್ಲಿನ ನಾಗರಿಕರು ಬೇಡಿಕೆ ಮುಂದಿಟ್ಟಿದ್ದಾರೆ. ಎರಡೂ ಸೇತುವೆಗಳನ್ನೂ ಈ ಆಡಳಿತ ಅವಧಿಯಲ್ಲಿ ಪೂರ್ಣಗೊಳಿಸಲು ಪಂಚಾಯಿತಿ ಆಡಳಿತ ಪ್ರಯತ್ನಿಸಲಿದೆ.