ಮೀನುಗಾರಿಕೆ ಇಲಾಖೆಯ ಲೆಕ್ಕಾಚಾರದಂತೆ ಕಾಸರಗೋಡು ಜಿಲ್ಲೆಯಲ್ಲಿ 129 ಯಾಂತ್ರೀಕೃತ ಮೀನುಗಾರಿಕಾ ಬೋಟ್‌ಗಳಿವೆ. ಕಾಸರಗೋಡು ಕಸಬಾದ 12, ಮಂಜೇಶ್ವರ 23, ಕುಂಬಳೆ ಆರಿಕ್ಕಾಡಿ 4, ಹೊಸದುರ್ಗ 18, ತೈಕಡಪ್ಪುರ 22, ನೀಲೇಶ್ವರ 13, ಮಡಿಕ್ಕರ 30 ಮತ್ತು ಪಡನ್ನ ಕಡಪ್ಪುರದಲ್ಲಿ 7 ಯಾಂತ್ರೀಕೃತ ಬೋಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಹೊರತಾಗಿ ಜಿಲ್ಲೆಯ ವಿವಿಧ ಮೀನುಗಾರಿಕಾ ಕೇಂದ್ರಗಳಲ್ಲಿ 200 ಯಾಂತ್ರೀಕೃತ ಬೋಟ್‌ಗಳು ಮೀನುಗಾರಿಕೆಗಾಗಿ ಆಳ ಸಮುದ್ರಕ್ಕೆ ತೆರಳುತ್ತವೆ.