ಬಾತ್‌ರೂಮ್‌ನಲ್ಲಿ ಕುಳಿತಲ್ಲೇ ಸಾವು

Death
Death
Published on

ಕುಂದಾಪುರ : ತ್ರಾಸಿ ಗ್ರಾಮದ ಹೋಲಿಕ್ರಾಸ್ ತ್ರಾಸಿ ಜಂಕ್ಷನ್ ಬಳಿಯ ನಿವಾಸಿ ಜಯಂತ ಶೆಟ್ಟಿಗಾರ (58) ಎಂಬುವರಿಗೆ ಸುಮಾರು 15 ವರ್ಷಗಳಿಂದ ರಕ್ತದೊತ್ತಡ ಕಾಯಿಲೆ ಇದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.

ಮಂಗಳವಾರ ಸಂಜೆ ಮನೆಯ ಬಾತ್‌ರೂಮ್‌ನಲ್ಲಿ ಜಯಂತ್ ಶೆಟ್ಟಿಗಾರ್ ಅವರು ಒರಗಿ ಕುಳಿತು ಸ್ಥಿತಿಯಲ್ಲಿದ್ದು, ಮಾತನಾಡುತ್ತಿರಲಿಲ್ಲ. ಕೂಡಲೇ ಅವರನ್ನು ಕುಂದಾಫುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯಾಧಿಕಾರಿಯವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net