ವಿದ್ಯುತ್ ಸ್ಪರ್ಶಿಸಿ ಸಾವು

death
death
Published on
ಉಪ್ಪಿನಂಗಡಿ: ಪೆರ್ನೆಯ ಚೀಂಕ್ರಗುರಿ ಎಂಬಲ್ಲಿ ಮನೆ ಬಳಿ ವಿದ್ಯುತ್‌ಲೈನ್‌ಗೆ ತಾಗಿರುವ ಗೆಲ್ಲುಗಳನ್ನು ಕಡಿಯುತ್ತಿರುವ ವೇಳೆ ವಿದ್ಯುತ್ ಪ್ರವಹಿಸಿ ಚಂದಪ್ಪ (61) ಎಂಬುವರು ಮೃತಪಟ್ಟಿದ್ದಾರೆ.
ಬುಧವಾರ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದ ಅವರು ಮನೆಯಲ್ಲಿ ವಿದ್ಯುತ್ ವ್ಯತ್ಯಯದಿಂದ ಮನೆ ಬಳಿ ವಿದ್ಯುತ್ ಲೈನ್‌ಗೆ ತಾಗಿರುವ ಮರ, ಗಿಡ ಕಡಿಯಲು ಮನೆಯಿಂದ ಹೋಗಿದ್ದರು.
ಗೆಲ್ಲು ಕಡಿಯುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ಪತ್ನಿ ಶಾರದಾ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net