ಸಂಗೊಳ್ಳಿ ರಾಯಣ್ಣನಿಗೆ ನುಡಿ ನಮನ

ಉಡುಪಿಯಲ್ಲಿ ಸಂಗೊಳ್ಳಿ ರಾಯಣ್ಣ ನುಡಿನಮನ ಕಾರ್ಯಕ್ರಮ ನಡೆಯಿತು. ಗಣನಾಥ್​ ಶೆಟ್ಟಿ ಎಕ್ಕಾರು, ಪೂರ್ಣಿಮಾ, ಡಾ. ಅಶೋಕ್​ ಕಾಮತ್, ರಾಜೇಂದ್ರ ಭಟ್​ ಕೆ., ಯು.ವಿಶ್ವನಾಥ್​ ಶೆಣೈ, ಜನಾರ್ದನ್​ ಕೊಡವೂರು, ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ರವಿರಾಜ್​ ಎಚ್​.ಪಿ. ಇತರರಿದ್ದರು.
ಉಡುಪಿಯಲ್ಲಿ ಸಂಗೊಳ್ಳಿ ರಾಯಣ್ಣ ನುಡಿನಮನ ಕಾರ್ಯಕ್ರಮ ನಡೆಯಿತು. ಗಣನಾಥ್​ ಶೆಟ್ಟಿ ಎಕ್ಕಾರು, ಪೂರ್ಣಿಮಾ, ಡಾ. ಅಶೋಕ್​ ಕಾಮತ್, ರಾಜೇಂದ್ರ ಭಟ್​ ಕೆ., ಯು.ವಿಶ್ವನಾಥ್​ ಶೆಣೈ, ಜನಾರ್ದನ್​ ಕೊಡವೂರು, ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ರವಿರಾಜ್​ ಎಚ್​.ಪಿ. ಇತರರಿದ್ದರು.
Published on

* ಉಡುಪಿಯಲ್ಲಿ ಕ್ರಾಂತಿವೀರನ ಸ್ಮರಣೆ

ಉಡುಪಿ: ಆಂಗ್ಲರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ, ನಾಡಿನ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನಗೈದ ಕಿತ್ತೂರಿನ ವೀರ ಸೇನಾನಿ, ಕನ್ನಡಾಂಬೆಯ ಹೆಮ್ಮೆಯ ಪುತ್ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುಣ್ಯಸ್ಮರಣೆ ನಿಮಿತ್ತ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ದ.ಕ.-ಉಡುಪಿ ಜಿಲ್ಲಾ ವತಿಯಿಂದ ಯಕ್ಷಗಾನ ಕಲಾ ರಂಗದ ಐವೈಸಿ ಸಭಾಂಗಣದಲ್ಲಿ ಸೋಮವಾರ (ಜ.26) ಗೌರವ ನುಡಿ ನಮನ ಸಲ್ಲಿಸಲಾಯಿತು.
ಬಳಗದ ಅಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಮಾತನಾಡಿ, ರಾಯಣ್ಣನ ಯಶೋಗಾಥೆ ಮತ್ತು ಅಭಿಮಾನಿ ಬಳಗದಿಂದ ನಡೆಯುವ 'ಹುತಾತ್ಮ ಮಾಲಾ ಅಭಿಯಾನ'ದ ಕುರಿತು ಮಾಹಿತಿ ನೀಡಿದರು.
ಡಾ. ಶಿವರಾಮ ಕಾರಂತ ಟ್ರಸ್ಟ್​ನ ಅಧ್ಯಕ್ಷ ಗಣನಾಥ್​ ಶೆಟ್ಟಿ ಎಕ್ಕಾರು, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಇತರರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಬಳಗದ ಗೌರವಾಧ್ಯಕ್ಷ ಜನಾರ್ದನ್​ ಕೊಡವೂರು, ಜಿಲ್ಲಾ ಡಯಟ್​ ಪ್ರಾಂಶುಪಾಲ ಡಾ. ಅಶೋಕ್​ ಕಾಮತ್​, ಜೇಸಿಐ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್​ ಕೆ., ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಯು.ವಿಶ್ವನಾಥ್​ ಶೆಣೈ, ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್​ ಎಚ್​.ಪಿ., ಪೂರ್ಣಿಮಾ ಜನಾರ್ದನ್​, ವಸಂತ್​ ಆರ್​., ರಾಜೇಶ್​ ಭಟ್​ ಪಣಿಯಾಡಿ, ರಾಘವೇಂದ್ರ ಪ್ರಭು ಕರ್ವಾಲು, ಶಿಲ್ಪಾ ಜೋಶಿ, ರಂಜನಿ ವಸಂತ್​, ದೀಪಾ ಕರ್ಕಿ, ಪ್ರಶಾಂತ್​ ಕಾಮತ್​ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net