ಸ್ಕೂಟರ್‌ನಿಂದ ನಿಯಂತ್ರಣ ತಪ್ಪಿ ಬಿದ್ದು ಸಾವು

ACCIDENT
ACCIDENT
Published on
ಕುಂದಾಪುರ: ಗುಲ್ವಾಡಿ ಶಾಲೆ ಬಳಿ ಸೋಮವಾರ ರಾತ್ರಿ ಸ್ಕೂಟರ್‌ನಿಂದ ನಿಯಂತ್ರಣ ತಪ್ಪಿ ಬಿದ್ದು ಕುಂದಾಪುರ ತಾಲೂಕು ಕೋಣಿ ಗ್ರಾಮದ ಉಮೇಶ ಪೂಜಾರಿ(58) ಎಂಬುವರು ಮೃತಪಟ್ಟಿದ್ದಾರೆ. ಅವರು ಹೆಂಚಿನ ಕಾರ್ಖಾನೆಯಲ್ಲಿ ಕೆಲಸ ವಾಡಿಕೊಂಡಿದ್ದರು.
ಅಪಘಾತ ಸಂಭವಿಸಿದ ಕೂಡಲೇ ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಉಮೇಶ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಕುಂದಾಪುರ ಗ್ರಾವಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೋಟೆಲ್ ಕೆಲಸಕ್ಕೆ ತೆರಳಿದಾತ ನಾಪತ್ತೆ
ಕುಂದಾಪುರ: ಶಿವಮೊಗ್ಗದ ಹೋಟೆಲ್‌ನಲ್ಲಿ ಕೆಲಸ ವಾಡಿಕೊಂಡಿದ್ದ ಕಾಳಾವರ ನಿವಾಸಿ ಸುಧಾಕರ ಶೆಟ್ಟಿ(40) ಎಂಬುವರು ನಾಪತ್ತೆಯಾಗಿದ್ದಾರೆ. ಅವರು ಆಗಾಗ ಕಾಳಾವರಕ್ಕೆ ಹಾಗೂ ಕೊಡ್ಲಾಡಿ ವಾರ್ಡಿ ಶಾಲೆ ಜೆಡುವಿನ ಪತ್ನಿ ಮನೆಗೆ ಬಂದು ಹೋಗುತ್ತಿದ್ದರು.
ಮೇ 7ರಂದು ಶಿವಮೊಗ್ಗದಿಂದ ಕಾಳಾವರಕ್ಕೆ ಬಂದು, ಅದೇ ದಿನ ಸಂಜೆ ಮನೆಯಿಂದ ವಾಪಸ್ ಶಿವಮೊಗ್ಗ ಹೋಟೆಲ್ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರು ಕೆಲಸಕ್ಕೂ ಹೋಗದೆ ಮನೆಗೂ ಬಾರದೆ ಕಾಣೆಯಾಗಿದ್ದಾರೆ. ಕುಂದಾಪುರ ಗ್ರಾವಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net