ಉಡುಪಿ ಜಿಲ್ಲೆ ಬೈಂದೂರಿನಲ್ಲಿ ನಡೆದ ಎಸ್ಐಆರ್ ತರಬೇತಿ ಕಾರ್ಯಕ್ರಮದಲ್ಲಿ ಸ್ವರೂಪಾ ಟಿ.ಕೆ ಮಾತನಾಡಿದರು. ಸೆಕ್ಟರ್ ಅಧಿಕಾರಿಗಳು ಮತ್ತು ಬೂತ್ ಮಟ್ಟದ ಅಧಿಕಾರಿಗಳ ಮೇಲ್ವಿಚಾರಕರು ಇದ್ದರು.
Published on:
Copied
Follow Us
* ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚನೆ
* ಬೈಂದೂರಿನಲ್ಲಿ ಎಸ್ಐಆರ್ ಪ್ರಗತಿ ಪರಿಶೀಲನಾ ಸಭೆ
ಉಡುಪಿ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ಐಆರ್) ಕಾರ್ಯದಲ್ಲಿ ವಿವಿಧೆಡೆ ಸಮಸ್ಯೆ, ತೊಡಕು ಉಂಟಾಗಬಹುದು. ಆದರೆ, ಸಮಸ್ಯೆ ಕಾರಣದಿಂದ ಪರಿಷ್ಕರಣೆಯಲ್ಲಿ ಯಾವುದೇ ಲೋಪ ಆಗಕೂಡದು. ದತ್ತಾಂಶ ನಮೂದು ಕೆಲಸದಲ್ಲಿ ಯಾವುದೇ ಅಡಚಣೆ ಆದಲ್ಲಿ ಆ ಕುರಿತು ಚರ್ಚಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸ್ವರೂಪಾ ಟಿ.ಕೆ ಸೂಚಿಸಿದರು.
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ (ಜು.6) ಆಯೋಜಿಸಿದ್ದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಎಲ್ಲ ಸೆಕ್ಟರ್ ಅಧಿಕಾರಿಗಳು ಮತ್ತು ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್ಒ) ಮೇಲ್ವಿಚಾರಕರು ಪಾಲ್ಗೊಂಡಿದ್ದರು. ಎಸ್ಐಆರ್ ಪ್ರಕ್ರಿಯೆಯಲ್ಲಿ ವಲಯ ಅಧಿಕಾರಿಗಳ ಜವಾಬ್ದಾರಿಗಳ ಕುರಿತು ಡಿಸಿ ಸ್ವರೂಪಾ ತರಬೇತಿ ನೀಡಿದರು. ಅಲ್ಲದೆ, ಬಿಎಲ್ಒ ಸೂಪರ್ವೈಸರ್ಗಳೊಂದಿಗೆ ನೇರ ಸಂವಾದ ನಡೆಸಿ, ಎದುರಾಗುವ ತೊಂದರೆ ನಿವಾರಿಸಿಕೊಂಡು ಸೂಕ್ತವಾಗಿ ದತ್ತಾಂಶ ಸಂಗ್ರಹಿಸಲು ಸಲಹೆ ನೀಡಿದರು.
ಜಿಲ್ಲಾಧಿಕಾರಿಯ ನಿರ್ದೇಶನದ ಮೇರೆಗೆ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ನೋಂದಣಿ ಅಧಿಕಾರಿ (ಇಆರ್ಒ)ಯ ಅಧ್ಯಕ್ಷತೆಯಲ್ಲಿ ಸೆಕ್ಟರ್ ಅಧಿಕಾರಿಗಳಿಗೆ ತುರ್ತು ವಿಶೇಷ ತರಬೇತಿ ನೀಡಲಾಯಿತು.
ಎಸ್ಐಆರ್ ದತ್ತಾಂಶ ನಮೂದು ಮಾಹಿತಿ
ವಿಧಾನಸಭಾ ಕ್ಷೇತ್ರ ಒಟ್ಟು ಮತದಾರರು ವಿತರಣೆಯಾದ ಅರ್ಜಿ ಡಿಜಿಟಲ್ ಆದ ಅರ್ಜಿ