ಜಿಲ್ಲೆಯಲ್ಲಿ ಎರಡು ಸಿಲಿಂಡರ್ ಹೊಂದಿರುವ ಗೃಹ ಬಳಕೆದಾರರು ಹೆಚ್ಚಿದ್ದು, ಒಂದೇ ಸಿಲಿಂಡರ್ ಹೊಂದಿದವರಿಗೆ ಆದ್ಯತೆಯ ಮೇಲೆ ಪೂರೈಕೆ ಮಾಡಬೇಕು. ಆರೋಗ್ಯ, ವಾಣಿಜ್ಯ, ಕೈಗಾರಿಕೆ, ಇಂಧನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಾರಿಗೆ, ಪೊಲೀಸ್ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘ-&ಸಂಸ್ಥೆಗಳಿಗೆ ಅಗತ್ಯವಿರುವ ಅನಿಲ ಸಿಲಿಂಡರ್ಗಳ ಬೇಡಿಕೆಯ ಪಟ್ಟಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಲ್ಲಿಸಬೇಕು ಎಂದು ಉಡಿಸಿ ಸೂಚಿಸಿದರು.