ಮಾವು ಕೊಯ್ಯುವಾಗ ವಿದ್ಯುತ್​ ಸ್ಪರ್ಶಿಸಿ ಡಿಸಿ ಕಚೇರಿ ಸಿಬಂದಿ ಮೃತ್ಯು

ಸದಾನಂದ ಶೇರಿಗಾರ್​
ಸದಾನಂದ ಶೇರಿಗಾರ್​
Published on
ಉಡುಪಿ: ಮಣಿಪಾಲ ಜಿಲ್ಲಾಧಿಕಾರಿ ಕಚೇರಿಯ ಹಿಂಭಾಗದಲ್ಲಿ ಶುಕ್ರವಾರ ಬೆಳಗ್ಗೆ ಮಾವಿನ ಮರಕ್ಕೆ ಏರಿ ಮಾವು ಕೊಯ್ಯುವಾಗ ವಿದ್ಯುತ್​ ಸ್ಪರ್ಶಿಸಿ ಗ್ರಾಮ ಸಹಾಯಕರೊಬ್ಬರು ಮೃತಪಟ್ಟಿದ್ದಾರೆ.
ಸದಾನಂದ ಶೇರಿಗಾರ್​ (54) ಮೃತರು. ಇವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗ್ರಾಮ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ಬೆಳಗ್ಗೆ ಸುಮಾರು 9.15ಕ್ಕೆ ಸದಾನಂದ ಅವರು ಜಿಲ್ಲಾಧಿಕಾರಿಗಳ ಕಚೇರಿಯ ಹಿಂಭಾಗದ ಕಂಪೌಂಡ್​ನಲ್ಲಿರುವ ಮಾವಿನ ಮರಕ್ಕೆ ಹತ್ತಿದ್ದರು. ಕಬ್ಬಿಣದ ಕೊಕ್ಕೆಯ ಸಹಾಯದಿಂದ ಮಾವಿನ ಹಣ್ಣುಗಳನ್ನು ಕೀಳಲು ಪ್ರಯತ್ನಿಸುತ್ತಿದ್ದಾಗ, ಆಕಸ್ಮಿಕವಾಗಿ ಕಬ್ಬಿಣದ ಕೊಕ್ಕೆ ಮರದ ಮೇಲ್ಭಾಗದಲ್ಲಿ ಹಾದುಹೋಗಿದ್ದ ಹೈ-ಟೆನ್ಷನ್​ ವಿದ್ಯುತ್​ ತಂತಿಗೆ ತಗುಲಿದೆ. ಪರಿಣಾಮವಾಗಿ ತೀವ್ರ ವಿದ್ಯುತ್​ ಆಘಾತ ಸಂಭವಿಸಿ, ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆಯು ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net