ಡೇವಿಡ್​ ಡಿಸೋಜಾ ಕೊಲೆ ಪ್ರಕರಣ; ಮತ್ತೊಬ್ಬ ಆರೋಪಿ ಬಂಧನ

ಲೋಕೇಶ್​ ತೇಜ ಕೊಠಾರಿ
ಲೋಕೇಶ್​ ತೇಜ ಕೊಠಾರಿ
Published on
ಉಡುಪಿ: ಮುದರಂಗಡಿಯ ಸೈಂಟ್​ ಕ್ಷೇವಿಯರ್​ ಚರ್ಚ್​ ಕಾಂಪ್ಲೆಕ್ಸ್​ನಲ್ಲಿ ಡೇವಿಡ್​ ಡಿಸೋಜಾ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೃತ್ಯಕ್ಕೆ ಬೈಕ್​ ಒದಗಿಸಿ ಅಪರಾಧಿಕ ಒಳಸಂಚು ನಡೆಸಿದ್ದ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಕಾರ್ಕಳ&ಪಡುಬಿದ್ರೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಬಾಳಿಹಿತ್ಲು ಹುದಾರ ಹೌಸ್​ ನಿವಾಸಿ ಲೋಕೇಶ್​ ತೇಜ ಕೊಠಾರಿ (42) ಎಂದು ಗುರುತಿಸಲಾಗಿದೆ.
ಆರೋಪಿ ಲೋಕೇಶ್​ ತೇಜ ಈ ಮೊದಲು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾಗ, ಈ ಪ್ರಕರಣದ ಆರೋಪಿ ಕಿಶೋರ್​ ರಾಮ ಪೂಜಾರಿ ಪರಿಚಯವಾಗಿ ಸ್ನೇಹಿತರಾಗಿದ್ದರು. ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಆರೋಪಿಗಳಾದ ಅನ್ಮೋಲ್​ ರಸ್ತೋಗಿ ಹಾಗೂ ರಾಜು ಎಂಬವರಿಗೆ ಲೋಕೇಶ್​ ಬೈಕ್​ ಒದಗಿಸಿದ್ದಲ್ಲದೆ, ಇತರ ಆರೋಪಿಗಳೊಂದಿಗೆ ಸೇರಿ ಕೊಲೆ ನಡೆಸಲು ಸಂಚು ರೂಪಿಸಿದ್ದನು. ವಿಶೇಷ ಕರ್ತವ್ಯದಲ್ಲಿದ್ದ ಕಾರ್ಕಳ ಹಾಗೂ ಪಡುಬಿದ್ರೆ ಪೊಲೀಸರು ಕಾರ್ಯಾಚರಣೆ ನಡೆಸಿ, ಬೈಂದೂರಿನ ಯಡ್ತರೆ ಎಂಬಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ತನಿಖಾಧಿಕಾರಿಗಳ ಮುಂದೆ ಹಾಜರುಪಡಿಸಿದ್ದರು. ಪೊಲೀಸರು ಬಂಧಿತನಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್​ ಫೋನ್​ಗಳು ಹಾಗೂ ಬೈಕ್​ನ ಇಂಜಿನ್​ ಮತ್ತು ಚಾಸೀಸ್​ ಸಂಖ್ಯೆಯನ್ನು ಅಳಿಸಲು ಬಳಸುತ್ತಿದ್ದ ಮಿಷಿನ್​ ವಶಪಡಿಸಿಕೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net