ಆದೂರು ಜಂಕ್ಷನ್‌ನಲ್ಲಿ ಅಪಾಯಕಾರಿ ಮರ

 ಆದೂರು ಜಂಕ್ಷನ್‌ನಲ್ಲಿರುವ ಬಸ್ ನಿಲ್ದಾಣ ಬಳಿಯಲ್ಲಿ ಅಪಾಯಕಾರಿಯಾಗಿರುವ ಬೃಹತ್ ಮರ.
ಆದೂರು ಜಂಕ್ಷನ್‌ನಲ್ಲಿರುವ ಬಸ್ ನಿಲ್ದಾಣ ಬಳಿಯಲ್ಲಿ ಅಪಾಯಕಾರಿಯಾಗಿರುವ ಬೃಹತ್ ಮರ.
Published on
ಮುಳ್ಳೇರಿಯ: ಕಾರಡ್ಕ ಪಂಚಾಯಿತಿಯ 11ನೇ ವಾರ್ಡ್‌ನ ಪ್ರಮುಖ ಜಂಕ್ಷನ್ ಆದೂರಿನಲ್ಲಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ಬೃಹತ್ ಮರವೊಂದು ಅಪಾಯಕಾರಿ ಸ್ಥಿತಿಯಲ್ಲಿದೆ. ಈಗಾಗಲೇ ಮರದ ದೊಡ್ಡ ಕೊಂಬೆ ಮುರಿದು ಬಿದ್ದು, ಬಸ್ ಶೆಡ್ ಭಾಗಶಃ ಕುಸಿದಿದೆ.
ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಮರವನ್ನು ಶೀಘ್ರವೇ ತೆರವು ಮಾಡಬೇಕು. ಭಾರಿ-ಗಾಳಿ ಮಳೆಗೆ ಮರ ಬಸ್ ನಿಲ್ದಾಣದ ಮೇಲೆ ಬಿದ್ದಲ್ಲಿ ದೊಡ್ಡ ಅನಾಹುತ ಸಂಭವಿಸಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರತಿದಿನ ನೂರಾರು ವಿದ್ಯಾರ್ಥಿಗಳು, ಮಹಿಳೆಯರು ಮತ್ತು ವೃದ್ಧರು ಜಂಕ್ಷನ್‌ನಲ್ಲಿರುವ ಬಸ್ ನಿಲ್ದಾಣವನ್ನು ಅವಲಂಬಿಸಿದ್ದಾರೆ. ಆದೂರು ಠಾಣೆ, ಚೆಕ್‌ಪೋಸ್ಟ್ ಮತ್ತು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಂಥ ಪ್ರಮುಖ ಸಂಸ್ಥೆಗಳು ಇದೇ ಪರಿಸರದಲ್ಲಿ ಕಾರ್ಯಾಚರಿಸುತ್ತಿವೆ.
ಮಳೆಗಾಲದಲ್ಲಿ ಮರ ಬೀಳುವ ಸಾಧ್ಯತೆಯಿದ್ದು, ದೊಡ್ಡ ಅವಘಡ ಸಂಭವಿಸುವ ಮೊದಲು ಮರ ತೆರವುಗೊಳಿಸಬೇಕೆಂದು ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಬಿ.ಎ.ಲತೀಫ್ ಅವರು ಜಿಲ್ಲಾಧಿಕಾರಿಗೆ ಇ-ಮೇಲ್ ಮೂಲಕ ಮನವಿ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net