25ಕ್ಕೂ ಹೆಚ್ಚು ಅಪಾಯಕಾರಿ ಮರಗಳಿವೆ: ನಿಡಿಗಲ್‌ನಿಂದ ಸೋಮಂತಡ್ಕ ತನಕದ ಸುಮಾರು 3 ಕಿ.ಮೀ. ವ್ಯಾಪ್ತಿಯಲ್ಲಿ 25ಕ್ಕೂ ಹೆಚ್ಚು ಅಪಾಯಕಾರಿ ಮರಗಳಿವೆ. ಈ ಪ್ರದೇಶದಲ್ಲಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ರಸ್ತೆ ವಿಸ್ತರಣೆಗಾಗಿ ಎರಡು ಬದಿಗಳಲ್ಲಿ ಮರಗಳ ಬುಡ ಭಾಗದವರೆಗೂ ಅಗೆಯಲಾಗಿದೆ. ಕೆಲವು ಮರಗಳನ್ನು ತೆರವುಗೊಳಿಸಿ ರಸ್ತೆ ವಿಸ್ತರಿಸಲಾಗಿದೆ. ರಸ್ತೆ ವಿಸ್ತರಣೆಗಾಗಿ ಮರಗಳ ಬೇರಿನ ಭಾಗದವರೆಗೂ ಮಣ್ಣು ತೆರವು ಮಾಡಿರುವುದರಿಂದ ಬುಡದಲ್ಲಿ ಮಣ್ಣು ಸಡಿಲಗೊಂಡು ಮರಗಳು ರಸ್ತೆಯತ್ತ ವಾಲಿ ನಿಂತಿವೆ. ಅಲ್ಲದೆ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ಮರಗಳನ್ನು ತೆರವುಗೊಳಿಸಲು, ಮಣ್ಣು ಅಗೆಯಲು ಬೃಹತ್ ಯಂತ್ರೋಪಕರಣಗಳನ್ನು ಬಳಸಲಾಗಿದ್ದು ಇದು ಕೂಡ ಮರಗಳ ಭವಿಷ್ಯಕ್ಕೆ ಮಾರಕವಾಗಿದೆ.