

ಕಾಸರಗೋಡು: ಜಾತಿ ನಿಂದನೆ ನಡೆಸಿ, ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಬದಿಯಡ್ಕದ ಚಿಕನ್ ಸ್ಟಾಲ್‌ವೊಂದರ ಮಾಲೀಕ ರವೀಂದ್ರ ಎಂಬಾತನ ವಿರುದ್ಧ ಬದಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಕ್ಕಿನಡ್ಕ ಉನ್ನತಿಯ ಶಿವಪ್ರಕಾಶ್ ಎಚ್. ಎಂಬುವರು, ಆ.11ರಂದು ಬೆಳಗ್ಗೆ ಚಿಕನ್ ಸ್ಟಾಲ್‌ನೊಳಗೆ ಆರೋಪಿ ತನಗೆ ಜಾತಿ ನಿಂದನೆ ನಡೆಸಿ ಹಲ್ಲೆಗೈದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.