ಜುಲೈ 3 ದಲಿತ ಜನಾಗ್ರಹ ಸಮಾವೇಶದಲ್ಲಿ 500 ಮಂದಿ ಭಾಗಿ

 ಸಮಿತಿ ಸಂಘಟನಾ ಸಂಚಾಲಕ ಸುಂದರ್​ ಮಾಸ್ಟರ್​ ಮಾತನಾಡಿದರು.
ಸಮಿತಿ ಸಂಘಟನಾ ಸಂಚಾಲಕ ಸುಂದರ್​ ಮಾಸ್ಟರ್​ ಮಾತನಾಡಿದರು.
Published on
ಉಡುಪಿ: ಕರ್ನಾಟಕ ದಲಿತ ಸಂರ್ಷ ಸಮಿತಿ ವತಿಯಿಂದ ಜುಲೈ 3ರಂದು ಪ್ರೀಡಂ ಪಾರ್ಕನಲ್ಲಿ ಹಮ್ಮಿಕೊಳ್ಳಲಾದ ದಲಿತ ಜನಾಗ್ರಹ ಸಮಾವೇಶದಲ್ಲಿ ಉಡುಪಿ ಜಿಲ್ಲೆಯಿಂದ 500 ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಸಮಿತಿ ಸಂಘಟನಾ ಸಂಚಾಲಕ ಸುಂದರ್​ ಮಾಸ್ಟರ್​ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ಸರ್ಕಾರ ವಿಶೇಷ ಟಕ ಯೋಜನೆ ಕಾಯ್ದೆ ಮೂಲಕ ಬಜೆಟ್​ನಲ್ಲಿ ವಿಶೇಷ ಅನುದಾನ ಒದಗಿಸಲಾಗುತ್ತಿದೆ. ಈವರೆಗೆ 3.5 ಲಕ್ಷ ಕೋಟಿ ರೂ. ನಿಗದಿ ಮಾಡಲಾಗಿದೆ. ಇಷ್ಟೊಂದು ದೊಡ್ಡ ಮೊತ್ತ ನಿಜವಾಗಿ ದಲಿತರಿಗೆ ತಲುಪಿದ್ದರೆ ಇಷ್ಟೊತ್ತಿಗೆ ಬಹಳಷ್ಟು ಅಭಿವೃದ್ಧಿಯಾಗುತ್ತಿತ್ತು. ಆದರೆ ಈ ಅನುದಾನವನ್ನು ದಲಿತರ ಕಾಲನಿ ಇಲ್ಲದ ಕಡೆಯೂ ಬಳಸಿದ್ದಾರೆ. ಅಂಬೇಡ್ಕರ್​ ಅಭಿವೃದ್ಧಿ ನಿಗಮ ಪ್ರಯೋಜನಕ್ಕೆ ಇಲ್ಲದಂತಾಗಿದೆ. ಈವರ್ಷ ಜಿಲ್ಲೆಗೆ 2 ಆಟೋ ಮತ್ತು ಕಾರು ಬಂದಿದೆ. ಭೂ ಒಡೆತನ ಯೋಜನೆಯಲ್ಲಿ ಓರ್ವ ಲಾನುಭವಿಗೆ 25 ಲಕ್ಷ ರೂ. ಮಂಜೂರು ಮಾಡಲಾಗಿದೆ. ಬಜೆಟ್​ ಪುಸ್ತಕದಲ್ಲಿ ಮಾತ್ರ ದಲಿತರಿಗೆ ಅನುದಾನ ತೋರಿಸುತ್ತಿದ್ದಾರೆ. ಆದರೆ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದಿಲ್ಲ ಎಂದು ಆರೋಪಿಸಿದರು.
ದಲಿತ ಸಮುದಾಯದ ಸುಮಾರು 19 ಬೇಡಿಕೆಗಳನ್ನು ರಾಜ್ಯ ಸರ್ಕಾರಕ್ಕೆ ತಲುಪಿಸುವ ನಿಟ್ಟಿನಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ. ಕಳೆದ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್​ ಪಕ್ಷ$ವನ್ನು ಬೆಂಬಲಿಸಿದ್ದೇವೆ. ಬೇಡಿಕೆ ಈಡೇರದಿದ್ದರೆ ಮುಂದಿನ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸುತ್ತೇವೆ ಎಂದು ಹೇಳಿದರು.
ಮುಖಂಡರಾದ ಶ್ಯಾಮರಾಜ್​ ರ್ಭಿತಿ, ಮುಖಂಡರಾದ ಸುರೇಶ್​ ಹಕ್ಲಾಡಿ, ಶ್ಯಾಮಸುಂದರ್​ ತೆಕ್ಕಟ್ಟೆ, ಸುರೇಶ್​, ಕೃಷ್ಣ ಬೆಳ್ಳೆ, ಮಂಜುನಾಥ ಗಿಳಿಯಾರ್​ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net