ಸ್ವಾವಲಂಬಿ ಬದುಕಿಗೆ ಹೈನುಗಾರಿಕೆ ಪೂರಕ

 ಅಳದಂಗಡಿ ಹಾಲು ಉತ್ಪಾದಕರ ಸಹಕಾರ ಸಂಘ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭವನ್ನು ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ರವಿರಾಜ ಹೆಗ್ಡೆ ಉದ್ಘಾಟಿಸಿದರು. ಎಚ್.ಪ್ರಭಾಕರ, ಸತೀಶ್ ಕೆ.ಕಾಶಿಪಟ್ಣ, ಸತೀಶ್ ಪೂಜಾರಿ ಮತ್ತಿತರರಿದ್ದರು.
ಅಳದಂಗಡಿ ಹಾಲು ಉತ್ಪಾದಕರ ಸಹಕಾರ ಸಂಘ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭವನ್ನು ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ರವಿರಾಜ ಹೆಗ್ಡೆ ಉದ್ಘಾಟಿಸಿದರು. ಎಚ್.ಪ್ರಭಾಕರ, ಸತೀಶ್ ಕೆ.ಕಾಶಿಪಟ್ಣ, ಸತೀಶ್ ಪೂಜಾರಿ ಮತ್ತಿತರರಿದ್ದರು.
Published on
ಬೆಳ್ತಂಗಡಿ: ಒಕ್ಕೂಟದಲ್ಲಿ ದಿನಕ್ಕೆ 4.65 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದ್ದು, ಗ್ರಾಹಕರಿಗೆ ಹಾಲು ಸೇರಿದಂತೆ ಗುಣಮಟ್ಟದ ಹಾಲಿನ ಉತ್ಪನ್ನಗಳನ್ನು ನೀಡಲಾಗುತ್ತಿದೆ. ಸರ್ಕಾರದ ಅನುದಾನ ಸೇರಿದಂತೆ ಹೈನುಗಾರರಿಗೆ ಈಗ ಒಂದು ಲೀಟರ್ ಹಾಲಿಗೆ 47 ರೂ. ಸಿಗುತ್ತಿದೆ. ಸ್ವಾವಲಂಬನೆಯ ಜೀವನಕ್ಕೆ ಹೈನುಗಾರಿಕೆ ಪೂರಕವಾಗಿದೆ ಎಂದು ಮಂಗಳೂರಿನ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದರು.
ಅಳದಂಗಡಿ ಹಾಲು ಉತ್ಪಾದಕರ ಸಹಕಾರ ಸಂಘ ಸುವರ್ಣ ಮಹೋತ್ಸವ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅಳದಂಗಡಿ ಸೊಸೈಟಿ ಅಧ್ಯಕ್ಷ ಪ್ರಶಾಂತ್ ವೇಗಸ್ ಅಧ್ಯಕ್ಷತೆ ವಹಿಸಿದ್ದರು.
ಸಂತ ಪೀಟರ್ ಕ್ಷೇವರ್ ಚರ್ಚ್ ಧರ್ಮಗುರು ಎಲಿಯಾಸ್ ಡಿಸೋಜ ಮಾತನಾಡಿದರು. ಅಳದಂಗಡಿ ಅರಮನೆ ತಿಮ್ಮಣ್ಣರಸ ಡಾ.ಪದ್ಮಪ್ರಸಾದ್ ಅಜಿಲರು ಉತ್ತಮ ಹೈನುಗಾರರು, ಮಾಜಿ ಅಧ್ಯಕ್ಷರನ್ನು ಗೌರವಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಕಂಬಳ ಓಟದ ಸಾಧಕ ಸತೀಶ್ ದೇವಾಡಿಗ ಅವರನ್ನು ಸನ್ಮಾನಿಸಿದರು.
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಎಚ್.ಪ್ರಭಾಕರ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಸತೀಶ್ ಕೆ.ಕಾಶಿಪಟ್ಣ, ಅಳದಂಗಡಿಯ ಉದ್ಯಮಿಗಳಾದ ಸತೀಶ್ ಪೂಜಾರಿ, ನಡಾಯಿ, ಕೆಎಂಎಫ್ ಉಪ ವ್ಯವಸ್ಥಾಪಕ ಸತೀಶ್ ರಾವ್, ವಿಸ್ತರಣಾಧಿಕಾರಿ ರಾಜೇಶ್ ಕಾಮತ್, ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ರಾಕೇಶ್ ಹೆಗ್ಡೆ, ಅಳದಂಗಡಿ ಹಾಲು ಉತ್ಪಾದಕ ಸಹಕಾರಿ ಸಂಘ ಉಪಾಧ್ಯಕ್ಷ ಅಶೋಕ್ ಸುವರ್ಣ, ನಿರ್ದೇಶಕರಾದ ಪ್ರಸಾದ್ ಪಿಂಟೋ, ಗಣೇಶ್ ದೇವಾಡಿಗ, ಲ್ಯಾನ್ಸಿ ರೊಡ್ರಿಗಸ್, ಧರ್ಣಪ್ಪ ಪೂಜಾರಿ, ಸುಧೀರ್, ಹರೀಶ್ ಪೂಜಾರಿ, ಸುರೇಶ್ ಪೂಜಾರಿ, ಸುಂದರ್, ಸುನಿಲ್, ಪುಷ್ಪಾವತಿ, ಮಲ್ಲಿಕಾ ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ಪ್ರಶಾಂತ್ ವೇಗಸ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಲ್ಫ್ರೆಡ್ ಫರ್ನಾಂಡಿಸ್ ಸಂಘದ ಸಾಧನೆಯ ವರದಿ ವಾಚಿಸಿದರು. ರಕ್ಷಕ ಅಜಿತ್ ಕುಮಾರ್ ನಿರೂಪಿಸಿದರು. ನಿರ್ದೇಶಕ ಸತೀಶ್ ಎಸ್.ಎಂ. ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net