ಕುಂದಾಪುರ:ಬಸ್ರೂರು ಸಮೀಪ ರಿಕ್ಷಾ ಡಿಕ್ಕಿಯಾಗಿ ಸೈಕಲ್ ಸವಾರ ಗಾಯಗೊಂಡಿದ್ದಾರೆ. ಬಳ್ಕೂರು ಗ್ರಾಮದ ಕಾಸನಬೆಟ್ಟು ನಿವಾಸಿ ಸಂತೋಷ ಡಿಸೋಜ ಗಾಯಗೊಂಡವರು.
ಮನೆಯಿಂದ ಸೈಕಲ್‌ನಲ್ಲಿ ಹೊರಟು ಬಸ್ರೂರು ಜನ ಸೇವಾ ಸೊಸೈಟಿ ಎದುರು ಸಿದ್ದಾಪುರ- ಕುಂದಾಪುರ ರಾಜ್ಯ ಹೆದ್ದಾರಿ 52ನ್ನು ದಾಟಿ ರಸ್ತೆಯ ಎಡ ಬದಿಯ ಅಂಚಿಗೆ ತಲುಪಿದಾಗ ಕಂಡ್ಲೂರು ಕಡೆಯಿಂದ ಬರುತ್ತಿದ್ದ ರಿಕ್ಷಾ ಸೈಕಲಿಗೆ ಡಿಕ್ಕಿ ಹೊಡೆದಿದೆ.
ಗಾಯಗೊಂಡ ಸೈಕಲ್ ಸವಾರನನ್ನು ಚಿಕಿತ್ಸೆಗಾಗಿ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.