ಉಡುಪಿ ಸೈಬರ್ ಕ್ರೈಂ ಪೊಲೀಸ್ ಠಾಣೆ ನಿರೀಕ್ಷಕ ನೀಲೇಶ್ ಜಿ.ಚೌಹಾಣ್, ಇತ್ತೀಚಿನ ಸೈಬರ್ ವಂಚನೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಸೈಬರ್ ಕ್ರೈಂ ಸ್ಪೆಷಲಿಸ್ಟ್ ಮತ್ತು ಪೊಲೀಸ್ ಕಾನ್‌ಸ್ಟೆಬಲ್ ನಿಲೇಶ್ ಅವರು ಸೈಬರ್ ಪ್ರಕರಣಗಳಲ್ಲಿ ಪೊಲೀಸರಿಗೆ ನೆರವಾಗಲು ಮತ್ತು ಪ್ರಾಯೋಗಿಕ ಅನುಭವ ಪಡೆಯಲು ವಿದ್ಯಾರ್ಥಿಗಳಿಗೆ ಪೊಲೀಸ್ ಠಾಣೆಯಲ್ಲಿ ಇಂಟರ್ನ್‌ಶಿಪ್ ಮಾಡುವಂತೆ ಮುಕ್ತ ಆಹ್ವಾನ ನೀಡಿದರು.