ಸಂಸ್ಕಾರ, ಮನುಷ್ಯತ್ವಕ್ಕೆ ಇರಲಿ ಆದ್ಯತೆ

 ಎಸ್ಸೆಸ್ಸೆಲ್ಸಿಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಉಳ್ಳಾಲ ವಲಯ ಬಂಟರ ಸಂಘ ಮಹಾಸಭೆಯಲ್ಲಿ ಅಭಿನಂದಿಸಲಾಯಿತು. ಉಳ್ಳಾಲ ವಲಯ ಬಂಟರ ಸಂಘ ಅಧ್ಯಕ್ಷ ಕೆ.ರವೀಂದ್ರ ರೈ ಕಲ್ಲಿಮಾರು, ಪಂಚ ಗ್ಯಾರಂಟಿ ಸಮಿತಿ ಮಂಗಳೂರು ತಾಲೂಕು ಅಧ್ಯಕ್ಷ ಸುರೇಂದ್ರ ಬಿ.ಕಂಬಳಿ, ಇರಾ ವಲಯ ಬಂಟರ ಸಂಘ ಅಧ್ಯಕ್ಷ ಜಗದೀಶ ಶೆಟ್ಟಿ ಇರಾ ಇನ್ನಿತರರು ಉಪಸ್ಥಿತರಿದ್ದರು.

Published on
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಯುವಸಮುದಾಯ ಮನೆ ಬೆಳಗಿಸಬೇಕೇ ಹೊರತು ಪೀಡಕರಾಗಬಾರದು. ಪ್ರಸ್ತುತ ದಿನಗಳಲ್ಲಿ ಶಿಕ್ಷಣ, ಪದವಿಗೆ ತೊಂದರೆಯಿಲ್ಲ, ಸಂಸ್ಕಾರ, ಮನುಷ್ಯತ್ವದ ಕೊರತೆಯಿದೆ. ಹಿರಿಯರು, ಪಾಲಕರು, ಗುರುಗಳನ್ನು ತಿರಸ್ಕಾರ ಮಾಡುವವರಲ್ಲಿ ಸಂಸ್ಕಾರವೇ ಇಲ್ಲ ಎಂದರ್ಥ ಉಳ್ಳಾಲ ವಲಯ ಬಂಟರ ಸಂಘ ಅಧ್ಯಕ್ಷ ಕೆ.ರವೀಂದ್ರ ರೈ ಕಲ್ಲಿಮಾರು ಅಭಿಪ್ರಾಯಪಟ್ಟರು.
ಉಳ್ಳಾಲ ವಲಯ ಬಂಟರ ಸಂಘದ 24ನೇ ವಾರ್ಷಿಕ ಮಹಾಸಭೆ ಪ್ರಯುಕ್ತ ಭಾನುವಾರ ಅಸೈಗೋಳಿ ಬಂಟರ ಭವನದಲ್ಲಿ ‘ಬಂಟರ ನೃತ್ಯ ವೈಭವ-2026’, ಗೌರವಾಭಿನಂದನೆ ಹಾಗೂ ಪ್ರತಿಭಾ ಪುರಸ್ಕಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉದ್ಯಮಿ ಚಂದ್ರಹಾಸ ಶೆಟ್ಟಿ ದೇರಳಕಟ್ಟೆ ಬಂಟರ ನೃತ್ಯ ವೈಭವ ಉದ್ಘಾಟಿಸಿದರು. ತುಳು ಕನ್ನಡ ಬರಹಗಾರ್ತಿ ರೂಪಕಲಾ ಎಸ್.ಆಳ್ವ, ಪಂಚ ಗ್ಯಾರಂಟಿ ಸಮಿತಿ ಮಂಗಳೂರು ತಾಲೂಕು ಅಧ್ಯಕ್ಷ ಸುರೇಂದ್ರ ಬಿ.ಕಂಬಳಿ, ಇರಾ ವಲಯ ಬಂಟರ ಸಂಘ ಅಧ್ಯಕ್ಷ ಜಗದೀಶ ಶೆಟ್ಟಿ ಇರಾ, ಬಂಟರ ಸಂಘದ ಮಾಜಿ ಅಧ್ಯಕ್ಷ ಡಾ.ಜಯಪಾಲ ಶೆಟ್ಟಿ ತಲಪಾಡಿ ದೊಡ್ಡಮನೆ, ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ಸುರೇಶ್ ಚೌಟ ಕಕ್ಕೆಮಜಲು ಮೊದಲಾದವರು ಉಪಸ್ಥಿತರಿದ್ದರು.
ರಕ್ಷಿತ್ ಶೆಟ್ಟಿ ಮತ್ತು ವರ್ಷಾ ತೀರ್ಪುಗಾರರಾಗಿದ್ದರು. ರಿತೇಶ್ ಶೆಟ್ಟಿ ಸ್ವಾಗತಿಸಿದರು. ಭಾರತಿ ರೈ ಪ್ರತಿಭಾ ಪುರಸ್ಕಾರ ನಿರ್ವಹಿಸಿದರು. ಶ್ರೀನಿಧಿ ಶೆಟ್ಟಿ ಸ್ಪರ್ಧಾ ವಿಜೇತರ ಹೆಸರು ವಾಚಿಸಿದರು. ವಿವೇಕ್ ರೈ ಪಾವೂರು ವಂದಿಸಿದರು. ಆನಂದ ಶೆಟ್ಟಿ ಎಂ. ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net