ಜ್ಞಾನಾರ್ಜನೆಗಾಗಿ ಓದುವ ಹವ್ಯಾಸ ರೂಢಿಸಿಕೊಳ್ಳಿ

ಸಮಾಜ ಸೇವಕ ಕರುಣಾಕರ ಶೆಟ್ಟಿ ಜೀವನಾಧಾರಿತ 'ಕರುಣಾ ಸಾಗರ' ಪುಸ್ತಕವನ್ನು ಜಯಕರ್​ ಶೆಟ್ಟಿ ಇಂದ್ರಾಳಿ ಬಿಡುಗಡೆ ಮಾಡಿದರು. ರವಿರಾಜ್​ ಎಚ್​.ಪಿ., ಪಾಂಗಾಳ ವಿಶ್ವನಾಥ ಶೆಟ್ಟಿ, ರೆ. ಕಿಶೋರಕುಮಾರ್​, ಶ್ವೇತಾ ಶ್ರೀನಿವಾಸ್​, ಪ್ರಭಾ ಶೆಟ್ಟಿ ಇತರರಿದ್ದರು.
ಸಮಾಜ ಸೇವಕ ಕರುಣಾಕರ ಶೆಟ್ಟಿ ಜೀವನಾಧಾರಿತ 'ಕರುಣಾ ಸಾಗರ' ಪುಸ್ತಕವನ್ನು ಜಯಕರ್​ ಶೆಟ್ಟಿ ಇಂದ್ರಾಳಿ ಬಿಡುಗಡೆ ಮಾಡಿದರು. ರವಿರಾಜ್​ ಎಚ್​.ಪಿ., ಪಾಂಗಾಳ ವಿಶ್ವನಾಥ ಶೆಟ್ಟಿ, ರೆ. ಕಿಶೋರಕುಮಾರ್​, ಶ್ವೇತಾ ಶ್ರೀನಿವಾಸ್​, ಪ್ರಭಾ ಶೆಟ್ಟಿ ಇತರರಿದ್ದರು.
Published on

* ಕಸಾಪ ಉಡುಪಿ ಅಧ್ಯಕ್ಷ ರವಿರಾಜ್​ ಎಚ್​.ಪಿ. ಆಶಯ

* 'ಕರುಣಾ ಸಾಗರ' ಕೃತಿ ಬಿಡುಗಡೆ ಕಾರ್ಯಕ್ರಮ

ಉಡುಪಿ: ಕಥೆ, ಕಾದಂಬರಿ, ಕವನ, ಚುಟುಕು ಹೀಗೆ ವಿವಿಧ ಪ್ರಕಾರದ ಪುಸ್ತಕಗಳು ಜ್ಞಾನಾರ್ಜನೆಯ ಮೂಲವಾಗಿದೆ. ಆದರೆ, ಮೊಬೈಲ್​ ಯುಗದಲ್ಲಿ ಓದುವ ಹವ್ಯಾಸ ನಿಂತಿದೆ. ಜನರು ಸಾಹಿತ್ಯವನ್ನು ಓದುವಂತಾಗಬೇಕೆಂದು ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್​ ವತಿಯಿಂದ 'ಮನೆಯೇ ಗ್ರಂಥಾಲಯ' ಅಭಿಯಾನ ನಡೆಸಿದ್ದೇವೆ. ಇಂದು ಬಿಡುಗಡೆಗೊಂಡ 'ಕರುಣಾ ಸಾಗರ' ಕೃತಿಯು ಜೀವನ ಚರಿತ್ರೆಯಾಗಿದ್ದು, ಅದು ಮೌಲ್ಯಾಧಾರಿತ ಜೀವನಕ್ಕೆ ಪ್ರೇರಣೆಯಾಗಿದೆ ಎಂದು ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್​ ಎಚ್​.ಪಿ. ಅಭಿಪ್ರಾಯಪಟ್ಟರು.
ಉಡುಪಿಯ ಕ್ರಿಶ್ಚಿಯನ್​ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಪಾಂಗಾಳ ವಿಶ್ವನಾಥ ಶೆಟ್ಟಿ ರಚಿತ ಪಾಂಗಾಳ ಕರುಣಾಕರ್​ ಶೆಟ್ಟಿ ಜೀವನಾಧಾರಿತ 'ಕರುಣಾಸಾಗರ' ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಸಮಾಜಸೇವಕ ಪಾಂಗಾಳ ಕರುಣಾಕರ ಶೆಟ್ಟಿ ಅವರ ಜೀವನಯಾನ ಚಿತ್ರಿಸುವ ಕೃತಿಯನ್ನು ಉಡುಪಿ ತುಳು ಕೂಟದ ಅಧ್ಯಕ್ಷ ಜಯಕರ್​ ಶೆಟ್ಟಿ ಇಂದ್ರಾಳಿ ಬಿಡುಗಡೆಗೊಳಿಸಿದರು. ಲೇಖಕ ಪಾಂಗಾಳ ವಿಶ್ವನಾಥ್​ ಶೆಟ್ಟಿ ಕೃತಿ ರಚನೆಯ ಅನುಭ ಹಂಚಿಕೊಂಡರು. ಅವರು ಬರೆದು ರಾಗ ಸಂಯೋಜಿಸಿದ್ದ ಕವನವನ್ನು ಇದೇ ವೇಳೆ ಕ್ರಿಶ್ಚಿಯನ್​ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಡಿದರು. 
ಸಮಾಜ ಸೇವಕ ಕರುಣಾಕರ ಶೆಟ್ಟಿ ಮಾತನಾಡಿ, ನನ್ನ ಜೀವನದ ಹಾದಿಯಲ್ಲಿ ಸಿಕ್ಕ ತಿರುವುಗಳ ಜತೆಜತೆಗೆ ಕಟ್ಟಿಕೊಂಡ ಬದುಕಿನ ಬಹುಪಾಲು ಸದ್ವಿನಿಯೋಗದ ಫಲ ಈ ಪುಸ್ತಕ ಎಂದರು.
ಕಾಲೇಜಿನ ಆಡಳಿತ ಮಂಡಳಿಯ ಮುಖ್ಯಸ್ಥ ರೆ. ಕಿಶೋರಕುಮಾರ್​ ಅಧ್ಯಕ್ಷತೆ ವಹಿಸಿದ್ದರು. ಪುಸ್ತಕದ ಮುಖಪುಟ ವಿನ್ಯಾಸ ಮಾಡಿದ ಹಾಗೂ 8ನೇ ತರಗತಿಯಲ್ಲಿ ಓದುತ್ತಿರುವಾಗಲೇ 4 ಪುಸ್ತಕ ಬರೆದ ಯುವ ಬರಹಗಾರ್ತಿ ಉನ್ನತಿ ಎಸ್​. ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಕರುಣಾಕರ ಶೆಟ್ಟಿ ಕುರಿತಾದ ಕಿರುಸಾಕ್ಷ್ಯ ಚಿತ್ರ ಪ್ರದರ್ಶಿಸಲಾಯಿತು. ಪ್ರಭಾ ಕರುಣಾಕರ್​ ಶೆಟ್ಟಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲೆ ಶ್ವೇತಾ ಶ್ರೀನಿವಾಸ್​ ಸ್ವಾಗತಿಸಿದರು. ಯಶ್​ ಕರುಣಾಕರ್​ ಶೆಟ್ಟಿ ವಂದಿಸಿದರು. ನಿವೃತ್ತ ರಾಜ್ಯಶಾಸ್ತ್ರ ಉಪನ್ಯಾಸಕ ದಯಾನಂದ್​ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net