ಗೋಶಾಲೆಗಳ ಅಭಿವೃದ್ಧಿಗೆ ಸಿಎಸ್​ಆರ್​ ನಿಧಿ ಬಳಸಲು ಅವಕಾಶ ನೀಡಿ: ಅಂಗೀರಸ

ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಕ್ಷೇತ್ರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಗೋಶಾಲೆಗಳ ಸಮಗ್ರ ಅಭಿವೃದ್ಧಿಗೆ ಕಂಪನಿಗಳ ಕಾಯ್ದೆ-2013ರ ಸಿಎಸ್​ಆರ್​ ನಿಧಿಯನ್ನು ಬಳಸಿಕೊಳ್ಳಲು ಸೂಕ್ತ ಮಾರ್ಗಸೂಚಿ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಪ್ರಜಾಪ್ರಭುತ್ವ ಕಲ್ಯಾಣ ಆಂದೋಲನ ವೇದಿಕೆ ಸಂಚಾಲಕ ನಾಗೇಶ್​ ಅಂಗೀರಸ ಹೇಳಿದರು.
csr fund
ಪ್ರಜಾಪ್ರಭುತ್ವ ಕಲ್ಯಾಣ ಆಂದೋಲನ ವೇದಿಕೆ ಸಂಚಾಲಕ ನಾಗೇಶ್​ ಅಂಗೀರಸ ಮಾತನಾಡಿದರು.
Published on: 

ಉಡುಪಿ: ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಕ್ಷೇತ್ರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಗೋಶಾಲೆಗಳ ಸಮಗ್ರ ಅಭಿವೃದ್ಧಿಗೆ ಕಂಪನಿಗಳ ಕಾಯ್ದೆ-2013ರ ಸಿಎಸ್​ಆರ್​ ನಿಧಿಯನ್ನು ಬಳಸಿಕೊಳ್ಳಲು ಸೂಕ್ತ ಮಾರ್ಗಸೂಚಿ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಪ್ರಜಾಪ್ರಭುತ್ವ ಕಲ್ಯಾಣ ಆಂದೋಲನ ವೇದಿಕೆ ಸಂಚಾಲಕ ನಾಗೇಶ್​ ಅಂಗೀರಸ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿಯೂ ಸುಮಾರು 500ಕ್ಕೂ ಅಧಿಕ ಗೋಶಾಲೆಗಳಿದ್ದು, ಅತಿ ಹೆಚ್ಚಿನ ಸಂಖ್ಯೆಯ ಮೂಕಜೀವಿಗಳಿಗೆ ಆಶ್ರಯ ಹಾಗೂ ಆರೈಕೆಯನ್ನು ನೀಡುತ್ತಿವೆ. ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಇವಕ್ಕೆ ಆರ್ಥಿಕ ನೆರವಿನ ಅಗತ್ಯವಿದೆ. ಕಂಪನಿಗಳ ಕಾಯ್ದೆ 2013ರ ಅನುಸೂಚಿ ಪ್ರಕಾರ ಪ್ರಾಣಿ ಕಲ್ಯಾಣ ಚಟುವಟಿಕೆಗಳನ್ನು ಅರ್ಹ ಕ್ಷೇತ್ರವೆಂದು ಗುರುತಿಸಲಾಗಿದೆ. ಹಾಗಾಗಿ ಸಿಎಸ್​ಆರ್​ ನಿಧಿಗಳನ್ನು ಗೋಶಾಲೆಗಳ ಸಬಲೀಕರಣಕ್ಕೆ ಬಳಸಿಕೊಳ್ಳಲು ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳು ಹಾಗೂ ಇತರೆ ಕಾರ್ಪೊರೇಟ್​ ಸಂಸ್ಥೆಗಳಿಗೆ ಸೂಕ್ತ ಯೋಜನೆಯನ್ನು ರೂಪಿಸಲು ಪ್ರೋತ್ಸಾಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಿಎಸ್​ಆರ್​ ನಿಧಿಯ ನೆರವಿನಿಂದ ಗೋಪಾಲಕೇರಿಗಳ ನಿಮಾರ್ಣ, ಕುಡಿಯುವ ನೀರಿನ ಸೌಲಭ್ಯ, ಮೇವು ಸಂಗ್ರಹಣೆ, ಪಶುವೈದ್ಯಕಿಯ ಆರೈಕೆ, ತ್ಯಾಜ್ಯ ನಿರ್ವಹಣೆ ಹಾಗೂ ಜೈವಿಕ ಅನಿಲ ಘಟಕಗಳ ಅಭಿವೃದ್ಧಿಗೆ ಬಳಸಲು ಅವಕಾಶ ಕಲ್ಪಿಸಬೇಕು. ದೇಶಾದ್ಯಂತ ಗೋಶಾಲೆಗಳ ಅಭಿವೃದ್ಧಿಗೆ ಉದ್ಯೋಗಖಾತ್ರಿ ಯೋಜನೆಯಡಿಯಲ್ಲಿ ಗೋಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net