ಕೃಷಿಕರಿಗೆ ಬೆಳೆ ವಿಮೆ ಅಗತ್ಯ

 ಪಡುಪಣಂಬೂರು ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ಷಣ್ಮುಗಂ, ಗ್ರಾಮಸ್ಥ ವಿನೋದ್, ಪ್ರೇಮಲತಾ ಮೊದಲಾದವರಿದ್ದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ಷಣ್ಮುಗಂ, ಗ್ರಾಮಸ್ಥ ವಿನೋದ್, ಪ್ರೇಮಲತಾ ಮೊದಲಾದವರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಈ ಬಾರಿ ಮಳೆ ಕಡಿಮೆ ಇರುವುದರಿಂದ ಕೃಷಿಕರಿಗೆ ಬೆಳೆ ವಿಮೆ ಅಗತ್ಯವಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಷಣ್ಮುಗಂ ಹೇಳಿದರು. ಗ್ರಾಮಸ್ಥ ವಿನೋದ್ ಮಾತನಾಡಿ, ಗ್ರಾಮಸ್ಥರಿಗೆ ಕೃಷಿ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಬೇಕು ಎಂದರು
ಪಡುಪಣಂಬೂರು ಗ್ರಾಮ ಪಂಚಾಯಿತಿಯ 2026-27ನೇ ಸಾಲಿನ ಗ್ರಾಮಸಭೆ ನಡೆಯಿತು.
ಗ್ರಾಮಸಭೆಗೆ ಹಾಜರಾಗಿ ಗ್ರಾಮಸ್ಥರ ಸಮಸ್ಯೆಗೆ ಉತ್ತರಿಸಬೇಕಾದ ಹೆಚ್ಚಿನ ಇಲಾಖೆಗಳ ಅಧಿಕಾರಿಗಳು ಗೈರುಹಾಜರಾಗಿದ್ದಾರೆ. ಗ್ರಾಮಸಭೆಗೆ ಗೈರು ಹಾಜರಾದ ಪೊಲೀಸ್ ಇಲಾಖೆ, ಕಾರ್ಮಿಕ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಸಹಿತ ಅನೇಕ ಅಧಿಕಾರಿಗಳಿಗೆ ನೋಟಿಸ್ ನೀಡಲು ನಿರ್ಧರಿಸಲಾಯಿತು.
ಪಡುಪಣಂಬೂರು ಕಲ್ಲಾಪು ತೋಕೂರು ಎಸ್.ಕೋಡಿ ರಸ್ತೆ ದುರಸ್ತಿ ಬಗ್ಗೆ ಕುಸುಮಾ ಚಂದ್ರಶೇಖರ್ ಮನವಿ ಮಾಡಿದರು. 10ನೇ ತೋಕೂರು ಕುಡಿಯುವ ನೀರಿನ ಟ್ಯಾಂಕ್ ದುರಸ್ತಿ ಬಗ್ಗೆ ಮೋಹನ್‌ದಾಸ್ ಹೇಳಿದರು. ೆಬ್ರವರಿಯಿಂದ ಏಪ್ರಿಲ್‌ವರೆಗೆ ಬಹುಗ್ರಾಮ ಕುಡಿಯುವ ನೀರು ಉಪ್ಪಿನ ಅಂಶ ಹೊಂದಿದೆ ಎಂದು ಗ್ರಾಮಸ್ಥರು ದೂರಿದರು.
ಕೆಮ್ರಾಲ್ ಆರೋಗ್ಯ ಕೇಂದ್ರದ ಅಧಿಕಾಎಇ ಕೋಮಲ ಮಾತನಾಡಿ, ಮಳೆಗಾಲದಲ್ಲಿ ಮನೆಯ ಸುತ್ತ ಸ್ವಚ್ಛತೆ, ನುಸಿ ಕಾಟದ ಬಗ್ಗೆ ಎಚ್ಚರಿಕೆಯೊಂದಿಗೆ ವ್ಯಾಪಕವಾಗಿ ಹರಡುವ ಮಲೇರಿಯಾ, ಡೆಂೆ ಮತ್ತಿತರ ಮಾರಕ ರೋಗಗಳ ಬಗ್ಗೆ ಎಚ್ಚರಿಕೆಯಿಂದ ಇರಲು ಮನವಿ ಮಾಡಿದರು.
ತೋಕೂರು ರಾಮಣ್ಣ ಶೆಟ್ಟಿ ಶಾಲೆ ಎದುರು ಭಾಗದ ಪಕ್ಷಿಕೆರೆ ಪ್ರಧಾನ ರಸ್ತೆಯಲ್ಲಿ ಶಾಲೆ ಬಿಡುವ ಹೊತ್ತಿನಲ್ಲಿ ಹೆದ್ದಾರಿ ಅಪಾಯಕಾರಿಯಾಗಿ ಪರಿಣಮಿಸಿದೆ. ಈ ಭಾಗದಲ್ಲಿ ಪೊಲೀಸರ ಅನುಮತಿ ಪಡೆದು ಬ್ಯಾರಿಕೇಡ್ ಅಳವಡಿಸುವ ಬಗ್ಗೆ ತೀರ್ಮಾನಿಸಲಾಯಿತು.
ಪಂಚಾಯಿತಿ ವ್ಯಾಪ್ತಿಯ ರೈಲ್ವೆ ನಿಲ್ದಾಣ ರಸ್ತೆ, ಕೆರೆಕಾಡು, ಕೋಲ್ನಾಡು ಮೆಸ್ಕಾಂ ಬಳಿ ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದರು.

ನೋಡಲ್ ಅಧಿಕಾರಿಯಾಗಿ ಅರಣ್ಯ ಇಲಾಖೆ ಮನೀಶ್, ಪಂಚಾಯಿತಿ ಆಡಳಿತ ಅಧಿಕಾರಿ ರಾಮಕೃಷ್ಣ ಐತಾಳ, ಪಿಡಿಒ ಸುಧೀರ್ ಮತ್ತಿತರರು ಉಪಸ್ಥಿತರಿದ್ದರು.

ಶಾಸಕರ ನಿಧಿಯಿಂದ 2.80 ಲಕ್ಷ ರೂ. ಬಿಡುಗಡೆ

ಪಡುಪಣಂಬೂರು ಅರಮನೆ ರಸ್ತೆಯಿಂದ ಹೊಯ್ಗೆ ಗುಡ್ಡೆ ಕದಿಕೆ ಭಂಡಾರ ಮನೆ ಸಂಪರ್ಕ ರಸ್ತೆಗೆ ಶಾಸಕರ ನಿಧಿಯಿಂದ 2.80 ಲಕ್ಷ ರೂ. ಬಿಡುಗಡೆಯಾಗಿದೆ. ಮಳೆಗಾಲ ಮುಗಿದ ಕೂಡಲೇ ದುರಸ್ತಿಪಡಿಸಲಾಗುವುದು ಎಂದು ಮಾಜಿ ಅಧ್ಯಕ್ಷ ವಿನೋದ್ ಸಾಲ್ಯಾನ್ ಸಭೆಯಲ್ಲಿ ತಿಳಿಸಿದರು. ಉಳಿದಂತೆ ಬೆಳ್ಳಾಯರು ಬಳಿ ವಿಕಲಚೇತನರೊಬ್ಬರ ಮನೆಗೆ ಕಾಲುಸಂಕ, ತೋಕೂರು ಕಂಬಳಬೆಟ್ಟು ಶ್ರೀ ನಾರಾಯಣಗುರು ರಸ್ತೆಗೆ ಸೂಕ್ತ ಚರಂಡಿ ವ್ಯವಸ್ಥೆ, ಕೆಆರ್‌ಡಿಎಲ್ ರಸ್ತೆ ಕಾಮಗಾರಿ ಕಳಪೆ ಬಗ್ಗೆ ಗ್ರಾಮಸ್ಥರಿಂದ ದೂರು ಕೇಳಿ ಬಂತು.

ಕುಡಿಯುವ ನೀರಿನ ಸಮಸ್ಯೆ

ವಿದ್ಯುತ್ ಕಂಬಗಳಲ್ಲಿ ಮರದ ಬಳ್ಳಿಗಳು ಆವರಿಸಿದ್ದು, ತೆರವುಗೊಳಿಸಬೇಕು. ಪಂಚಾಯಿತಿಗೆ ದಾರಿದೀಪದ ಬಿಲ್ ಹೊರೆಯಾಗುತ್ತಿದೆ. ಕಡಿಮೆಗೊಳಿಸಲು ಸರ್ಕಾರಕ್ಕೆ ಮನವಿ ಮಾಡಬೇಕು. ತೋಕೂರು, ತಾಳಿಗುರಿ ಬಳಿ ಆಗಾಗ್ಗೆ ವಿದ್ಯುತ್ ಕಡಿತ, ಸಮಸ್ಯೆ ಇದೆ. ಗ್ರಾಪಂ ವ್ಯಾಪ್ತಿಯ ಟಿಎ ಬೋರ್ಡ್ ಬಳಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಜೆಜೆಎಂ ಅನುಷ್ಠಾನಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದರು. ಇದಕ್ಕೆ ಜಿಪಂ ಇಂಜಿನಿಯರ್ ಪ್ರಶಾಂತ್ ಆಳ್ವ, ಪರಿಶೀಲಿಸುವ ಬಗ್ಗೆ ಭರವಸೆ ನೀಡಿದರು.

ವಿದ್ಯುತ್ ಕಂಬ ತೆರವುಗೊಳಿಸಿ

ಗ್ರಾಪಂ ಹಿಂದುಗಡೆ ಹೈಟೆನ್ಷನ್, ಬೆಳ್ಳಾಯರು ಚಂದ್ರಮೌಳೀಶ್ವರ ದೇವಸ್ಥಾನದ ಮಾಂಟ್ರಾಡಿ ಬಳಿ ಹಳೇ ವಿದ್ಯುತ್ ಕಂಬ ಅಪಾಯದಲ್ಲಿದ್ದು, ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ತೋಕೂರು ಅಂಗನವಾಡಿ ಬಳಿಯ ವಿದ್ಯುತ್ ಕಂಬದ ವಯರ್ ಸರಿಪಡಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆ ಪ್ರೇಮಲತಾ ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net