ಕಲ್ಯಾ ಸರ್ಕಾರಿ ಶಾಲೆಯಲ್ಲಿ ಕ್ರಿಕೆಟ್ ಟೂರ್ನಿ

ಕಲ್ಯಾ ಶಾಲಾ ಮೈದಾನದಲ್ಲಿ ನಡೆದ ಕೊತ್ತಲಿಗೆ ಕ್ರಿಕೆಟ್ ಟೂರ್ನಿ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು
ಕಲ್ಯಾ ಶಾಲಾ ಮೈದಾನದಲ್ಲಿ ನಡೆದ ಕೊತ್ತಲಿಗೆ ಕ್ರಿಕೆಟ್ ಟೂರ್ನಿ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು
Published on
ಕಾರ್ಕಳ: ಚೈತನ್ಯ ಮಿತ್ರ ಮಂಡಳಿ, ಚೈತನ್ಯ ಮಹಿಳಾ ಮತ್ತು ಯುವತಿ ಮಂಡಳಿ, ಚೈತನ್ಯ ಕಿಶೋರ ಕಿಶೋರಿ ಸಂಘದ ಆಶ್ರಯದಲ್ಲಿ ಕೊತ್ತಲಿಗೆ ಬ್ಯಾಟ್ ಕ್ರಿಕೆಟ್ ಪಂದ್ಯಾಟ ಕಲ್ಯಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಇತ್ತೀಚೆಗೆ ನಡೆಯಿತು.
ಉದ್ಯಮಿ ಮಿಥುನ್ ಅಧಿಕಾರಿ ಕಾರ್ಯಕ್ರಮ ಉದ್ಘಾಟಿಸಿದರು. ದಿನೇಶ್ ಪೂಜಾರಿ ಕ್ರೀಡಾಂಗಣ ಉದ್ಘಾಟಿಸಿದರು. ಸತೀಶ್ ಪೂಜಾರಿ ಬೋಳ, ನಿತಿನ್ ಕುಮಾರ್, ಪ್ರಕಾಶ್ ಶೆಟ್ಟಿ ನಿಟ್ಟಿ, ಪ್ರವೀಣ್ ಪೂಜಾರಿ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಉದ್ಯಮಿ ಜೆರಾಲ್ಡ್ ಪಿಂಟೋ ಬಹುಮಾನ ವಿತರಿಸಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಶಂಕರ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಮೊಹಮ್ಮದ್ ಅಬ್ದುಲ್ ಖಾದರ್, ಸತೀಶ್ ಆಚಾರ್ಯ, ಸಂತೋಷ್ ಶೆಟ್ಟಿ, ಕಿರಣ್ ಕುಲಾಲ್ ಬೋಳ, ಅಶೋಕ್ ಶೆಟ್ಟಿಗಾರ್, ಶಶಿಕಲಾ, ರಘುಪತಿ ಪೂಜಾರಿ, ರೇಣು, ಶ್ರೀಕೃಷ್ಣ ಪೂಜಾರಿ, ಮಲ್ಲಿಕಾರ್ಜುನ್ ಎಸ್.ಎಸ್, ರೂಪ, ಸುದರ್ಶನ್ ಪೂಜಾರಿ, ಧೀರಜ್ ಶೆಟ್ಟಿ, ರವಿರಾಜ್ ನಾಯ್ಕ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net