ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಆಹಾರದ ಅರಿವು

ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ಅಗ್ನಿ ಇಲ್ಲದೆ ಆಹಾರ ತಯಾರಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು
ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ್ದ ಅಗ್ನಿ ಇಲ್ಲದೆ ಆಹಾರ ತಯಾರಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು
Published on

ಕುಂದಾಪುರ:ವಿದ್ಯಾರ್ಥಿಗಳಲ್ಲಿಸೃಜನಶೀಲತೆ,ಆರೋಗ್ಯಕರಆಹಾರದ ಅರಿವು ಬೆಳೆಸುವಲ್ಲಿಇಂತಹ ಚಟುವಟಿಕೆಗಳು ಮಹತ್ತರಪಾತ್ರ ವಹಿಸುತ್ತವೆ ಎಂದು ಸಂಜಯಗಾಂಧಿ ಚಾರಿಟೆಬಲ್ ಟ್ರಸ್ಟ್ಕಾರ್ಯದರ್ಶಿ ನವೀನ್ ಶೆಟ್ಟಿಅಭಿಪ್ರಾಯಪಟ್ಟರು.

ಅಂಪಾರುಸಂಜಯ ಗಾಂಧಿ ಆಂಗ್ಲ ಮಾಧ್ಯಮಶಾಲೆಯಲ್ಲಿ ಶನಿವಾರ ಆಯೋಜಿಸಿದ್ದಅಗ್ನಿ ಇಲ್ಲದೆ ಆಹಾರ ತಯಾರಿಸ್ಪರ್ಧಾ ಕಾರ್ಯಕ್ರಮದಲ್ಲಿಮಾತನಾಡಿದರು.

ಸ್ಪರ್ಧೆಯಲ್ಲಿಚರಕ,ಆತ್ರೇಯ,ಶುಶ್ರುತ,ಅಗಸ್ತ್ಯಹೆಸರನ ತಂಡಗಳಾಗಿ ವಿದ್ಯಾರ್ಥಿಗಳುಭಾಗವಹಿಸಿದ್ದರು.ವಿವಿಧಬಗೆಯ ಆರೋಗ್ಯಕರ ಪೌಷ್ಟಿಕ ಆಹಾರ,ಜ್ಯೂಸ್ತಯಾರಿಸಿದರು.ತರಕಾರಿಗಳಸಲಾಡ್,ಕೋಸಂಬರಿ,ಡ್ರೈಫ್ರೂಟ್ಸ್ಲಾಡು,ಅವಲಕ್ಕಿ,ಮಂಡಕ್ಕಿಚುರುಮುರಿ,ಹಣ್ಣುಗಳಸಲಾಡ್,ಸ್ಯಾಂಡ್‌ವಿಚ್,ಸ್ಪ್ರೌಟ್ಚಾಟ್ಸ್ ಮೊದಲಾದ ರುಚಿಕರವಾದಆರೋಗ್ಯಕರ ಆಹಾರಗಳು ಗಮನ ಸೆಳೆದವು.ತಂಡಗಳನಾಯಕರು,ಸದಸ್ಯರುತಮ್ಮ ಪ್ರತಿಭೆ,ತಂಡದಸಹಕಾರವನ್ನು ಪ್ರದರ್ಶಿಸಿದರು.ವಿದ್ಯಾರ್ಥಿಗಳಿಗೆಮಾರ್ಗದರ್ಶನ ನೀಡಲು ಪ್ರತಿ ತಂಡಗಳನಿಯೋಜಿತ ಶಿಕ್ಷಕರು ಸಹಕರಿಸಿದರು.

ಟ್ರಸ್ಟ್ಕಾರ್ಯದರ್ಶಿ ನವೀನ್ ಶೆಟ್ಟಿ,ಶಾಲಾಆಡಳಿತಾಧಿಕಾರಿ ಚೈತ್ರಾ ಯಡಿಯಾಳತೀರ್ಪುಗಾರರಾಗಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net