

ವಿಜಯವಾಣಿ ಸುದ್ದಿಜಾಲ ಕಾರ್ಕಳ
ಇದು ಕೇವಲ ಬಹುಮಾನ ಕೊಡುವ ಕಾರ್ಯಕ್ರಮವಲ್ಲ. ವಿದ್ಯಾರ್ಥಿಗಳ ಪರಿಶ್ರಮ, ಪ್ರತಿಭೆ ಗುರುತಿಸಿ, ಗೌರವ ಸೂಚಿಸುವ ಕಾರ್ಯಕ್ರಮ ಹಾಗೂ ಮುಂದಿನ ವರ್ಷದ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಕೊಡುವ ಅರ್ಥಪೂರ್ಣ ಕಾರ್ಯಕ್ರಮ. ವಿದ್ಯಾರ್ಥಿಗಳ ಈ ಸಾಧನೆಯಲ್ಲಿ ಉಪನ್ಯಾಸಕರು ಮಾತ್ರವಲ್ಲದೆ ನಿಲಯ ಪಾಲಕರ ತ್ಯಾಗ, ಪರಿಶ್ರಮ ಅಡಗಿದೆ. ಶಿಕ್ಷಕರು, ಹೆತ್ತವರು ಹಾಗೂ ಶಿಕ್ಷಣ ನೀಡಿದ ಸಂಸ್ಥೆಯನ್ನು ಮರೆಯಬಾರದು.
— ಗಣಪತಿ ಭಟ್ ಕೆ.ಎಸ್. ಕ್ರಿಯೇಟಿವ್ ಸಂಸ್ಥೆ ಸಹ ಸಂಸ್ಥಾಪಕ
ರಾಷ್ಟ್ರೀಯಮಟ್ಟದಲ್ಲಿ ನಡೆಯುವ ನೀಟ್‌ನಂತಹ ಅನೇಕ ಪರೀಕ್ಷೆಗಳು ಹಲವು ಕಾರಣಗಳಿಂದ ರದ್ದಾದರೂ ವಿದ್ಯಾರ್ಥಿಗಳು ಅದರ ಬಗ್ಗೆ ಚಿಂತಾಗ್ರಸ್ತರಾಗದೆ ತಮ್ಮ ಗುರಿ ಈಡೇರಿಸುವ ನಿಟ್ಟಿನಲ್ಲಿ ನಮಗೆ ಸಿಕ್ಕಿರುವ ಹೆಚ್ಚುವರಿ ಅವಕಾಶವೆಂದು ಭಾವಿಸಿಕೊಂಡು ಮತ್ತಷ್ಟು ಓದಿನ ಕಡೆಗೆ ಗಮನ ಕೊಟ್ಟಾಗ ಇಂತಹ ಯಶಸ್ಸು ಸಾಧಿಸಲು ಸಾಧ್ಯ.
— ಡಾ.ಗಣನಾಥ ಶೆಟ್ಟಿ ಬಿ. ಕ್ರಿಯೇಟಿವ್ ಸಂಸ್ಥೆ ಸಹ ಸಂಸ್ಥಾಪಕ