ಗಾಳಿಯಲ್ಲಿ ಗುಂಡು ಹಾರಿಸಿ ಭೀತಿ ಸೃಷ್ಟಿ

Crime
Crime
Published on

ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಮೀಯಪದವಿನ ಬಟ್ಟಿಪದವಿನಲ್ಲಿ ದುಷ್ಕರ್ಮಿಗಳ ತಂಡವೊಂದು ಹಾಡಹಗಲು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಭೀತಿಯ ವಾತಾವರಣ ಸೃಷ್ಟಿಸಿದೆ. ದುಷ್ಕರ್ಮಿಗಳ ತಂಡ ಅಂಗಡಿ ಮಾಲೀಕ ಶುಹೈಬ್ ಮೊಯ್ದೀನ್ ಶೇಖ್ ಎಂಬುವರಿಗೆ ಬಂದೂಕು ತೋರಿಸಿ ಜೀವ ಬೆದರಿಕೆಯೊಡ್ಡಿ ಗಾಳಿಯಲ್ಲಿ ಗುಂಡು ಹಾರಿಸಿ ಭೀತಿ ಸೃಷ್ಟಿಸಿದೆ.

ಕಾರಿನಲ್ಲಿ ಆಗಮಿಸಿದ ತಂಡ ದಾಂಧಲೆ ನಡೆಸಿ ಪರಾರಿಯಾಗಿದೆ. ಈ ಕೃತ್ಯದಲ್ಲಿ ಮೀಯಪದವಿನ ನಿವಾಸಿಗಳಾದ ರಫೀಮ್ ಮತ್ತು ಖಾದರ್ ಮಡಂಗಲ್ಲು ಶಾಮೀಲಾಗಿರುವ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಇವರಿಬ್ಬರೂ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ.
ಕುಟುಂಬ ಕಲಹಕ್ಕೆ ಸಂಬಂಧಿಸಿ ಶುಹೈಬ್ ಹಾಗೂ ಮಚ್ಚಂಪಾಡಿ ನಿವಾಸಿಯೊಬ್ಬರ ಮಧ್ಯೆ ಜಗಳ ಇದ್ದ್ದು, ಇದರ ಹಿನ್ನೆಲೆಯಲ್ಲಿ ತಂಡ ಬಂದೂಕು ತೋರಿಸಿ ಬೆದರಿಕೆಯೊಡ್ಡಿ ಗಾಳಿಯಲ್ಲಿ ಗುಂಡು ಹಾರಿಸಿ ಭಯದ ವಾತಾವರಣ ಉಂಟುಮಾಡಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ. ಘಟನೆ ನಂತರ ತಂಡ ಬಂದ ಕಾರಿನಲ್ಲಿ ಪರಾರಿಯಾಗಿದ್ದು, ಮಂಜೇಶ್ವರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net