ಅಂದಿನ ಕಾಲದಲ್ಲಿ ಈ ಭಾಗದ ಏಕೈಕ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದ ಉಪ್ಪಿನಂಗಡಿಗೆ ಬೆಳ್ತಂಗಡಿ ತಾಲೂಕಿನ ಇಳಂತಿಲ, ಕರಾಯ, ತಣ್ಣೀರುಪಂತ, ಕುಪ್ಪೆಟ್ಟಿ, ಹಲೇಜಿ, ಜಾರಿಗೆಬೈಲು, ಗೇರುಕಟ್ಟೆ, ಗುರುವಾಯನಕೆರೆ, ಬಂದಾರು, ಪದ್ಮುಂಜ ಮೊದಲಾದ ಪ್ರದೇಶಗಳ ಜನರು ನಿರಾತಂಕವಾಗಿ ಬಂದು ಹೋಗಲು ಈ ಸೇತುವೆ ಅನೂಕಲವಾಗಿತ್ತು. ಜನರ ಬದುಕಿಗೆ ಹೊಸ ದಿಕ್ಸೂಚಿ ನೀಡಿದ್ದ ಉಪ್ಪಿನಂಗಡಿ ನೇತ್ರಾವತಿ ಸೇತುವೆ ಈಗ ಬಿರುಕು ಬಿಟ್ಟಿರುವುದು ಸ್ಥಳೀಯರಲ್ಲಿ ತೀವ್ರ ಕಳವಳ ಮೂಡಿಸಿದೆ.